ರಾಹುಲ್ ಗಾಂಧಿ 
ದೇಶ

ಮಿಜೋರಾಂ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಿಂದ ಪಾದಯಾತ್ರೆ, ಅಪಾರ ಬೆಂಬಲ

ಸೋಮವಾರ ಐಜ್ವಾಲ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರೆ ಕೈಗೊಂಡಿದ್ದು, ಅಪಾರ ಸಂಖ್ಯೆಯ ಜನಸ್ತೋಮ ಅವರಿಗೆ ಸ್ವಾಗತ ಕೋರಿತು. ವಿಧಾನಸಭೆ ಚುನಾವಣೆ ನಡೆಯಲಿರುವ ಮಿಜೋರಾಂನ ರಾಜಧಾನಿಯನ್ನು ತಲುಪಿದ ನಂತರ, ಅವರು ಚನ್ಮಾರಿ ಜಂಕ್ಷನ್‌ನಿಂದ ಪಾದಯಾತ್ರೆಯನ್ನು ಪ್ರಾರಂಭಿಸಿದರು.

ಐಜ್ವಾಲ್: ಸೋಮವಾರ ಐಜ್ವಾಲ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರೆ ಕೈಗೊಂಡಿದ್ದು, ಅಪಾರ ಸಂಖ್ಯೆಯ ಜನಸ್ತೋಮ ಅವರಿಗೆ ಸ್ವಾಗತ ಕೋರಿತು.

ವಿಧಾನಸಭೆ ಚುನಾವಣೆ ನಡೆಯಲಿರುವ ಮಿಜೋರಾಂನ ರಾಜಧಾನಿಯನ್ನು ತಲುಪಿದ ನಂತರ, ಅವರು ಚನ್ಮಾರಿ ಜಂಕ್ಷನ್‌ನಿಂದ ಪಾದಯಾತ್ರೆಯನ್ನು ಪ್ರಾರಂಭಿಸಿದರು ಮತ್ತು ನಗರದ ಅಂಕುಡೊಂಕಾದ ರಸ್ತೆಗಳ ಮೂಲಕ ಸಾಗಿದರು. 

ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಕಾಯುತ್ತಾ ನಿಂತಿದ್ದ ಜನರತ್ತ ಕೈಬೀಸಿ, ಪಾದಯಾತ್ರೆಯ ವೇಳೆ ತಮ್ಮನ್ನು ಭೇಟಿಯಾಗಲು ಬಂದವರ ಜತೆ ಕೈಕುಲುಕಿ ಸಂವಾದ ನಡೆಸಿದರು.

ಕೆಲವರು ಕಾಂಗ್ರೆಸ್ ಮುಖಂಡರೊಂದಿಗೆ ಸೆಲ್ಫಿ ತೆಗೆದುಕೊಂಡರು. ಪಾದಯಾತ್ರೆಯಲ್ಲಿ ಸಾಂಪ್ರದಾಯಿಕ ನೃತ್ಯಗಳನ್ನು ಸಹ ಪ್ರದರ್ಶಿಸಲಾಯಿತು.

ರಾಜಭವನದವರೆಗೆ ಸುಮಾರು 4-5 ಕಿ.ಮೀ ದೂರವನ್ನು ಕ್ರಮಿಸಲಿರುವ ರಾಹುಲ್ ಗಾಂಧಿ, ಮೆರವಣಿಗೆ ಮುಕ್ತಾಯದ ನಂತರ ರಾಜ್ಯಪಾಲರ ಭವನದ ಬಳಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

40 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 7 ರಂದು ಚುನಾವಣೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT