ಸುರೇಂದ್ರ ಕೋಲಿ ಮತ್ತು ಮಣಿಂದರ್ ಸಿಂಗ್ ಪಂಧಾರ್ 
ದೇಶ

ನಿತಾರಿ ಹತ್ಯಾಕಾಂಡ: ಪ್ರಮುಖ ಆರೋಪಿ ಕೋಲಿ, ಪಂಧೇರ್ ಖುಲಾಸೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ನಿತಾರಿ ಅತ್ಯಾಚಾರ ಮತ್ತು ನಿಗೂಢ ಸರಣಿ ಕೊಲೆ ಪ್ರಕರಣದ ಪ್ರಮುಖ ಆರೋಪಗಳಾದ ಸುರೇಂದ್ರ ಕೋಲಿ ಮತ್ತು ಮಣಿಂದರ್ ಸಿಂಗ್ ಪಂಧಾರ್ ಅವರನ್ನು ಅಲಹಾಬಾದ್ ಹೈಕೋರ್ಟ್​ ಸೋಮವಾರ ಖುಲಾಸೆಗೊಳಿಸಿದೆ.

ಪ್ರಯಾಗ್ರಾಜ್ (ಯುಪಿ): ನಿತಾರಿ ಅತ್ಯಾಚಾರ ಮತ್ತು ನಿಗೂಢ ಸರಣಿ ಕೊಲೆ ಪ್ರಕರಣದ ಪ್ರಮುಖ ಆರೋಪಗಳಾದ ಸುರೇಂದ್ರ ಕೋಲಿ ಮತ್ತು ಮಣಿಂದರ್ ಸಿಂಗ್ ಪಂಧಾರ್ ಅವರನ್ನು ಅಲಹಾಬಾದ್ ಹೈಕೋರ್ಟ್​ ಸೋಮವಾರ ಖುಲಾಸೆಗೊಳಿಸಿದೆ.

2007ರಲ್ಲಿ ಉದ್ಯಮಿ ಪಂಧೇರ್ ಮತ್ತು ಆತನ ಮನೆಕೆಲಸದಾತ ಕೋಲಿ ವಿರುದ್ಧ 19 ಪ್ರಕರಣಗಳು ದಾಖಲಾಗಿದ್ದವು. ಅತ್ಯಾಚಾರ ಮತ್ತು ಕೊಲೆ ಆರೋಪ ಪ್ರಕರಣ ಸಂಬಂಧ ಇಬ್ಬರಿಗೂ ಮರಣದಂಡನೆ ವಿಧಿಸಲಾಗಿತ್ತು.

ದಾಖಲಾದ ಒಟ್ಟು 19 ಪ್ರಕರಣಗಳಲ್ಲಿ ಸಿಬಿಐ 16 ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಮೂರು ಪ್ರಕರಣಗಳು ರದ್ದುಗೊಂಡಿದ್ದವು.

ಡಿಸೆಂಬರ್ 29, 2006 ರಂದು ನೋಯ್ಡಾದ ನಿಥಾರಿಯಲ್ಲಿರುವ ಪಂಧೇರ್ ಅವರ ಮನೆಯ ಸಮೀಪದ ಚರಂಡಿಯಲ್ಲಿ ಕಾಣೆಯಾದ ಬಾಲಕಿ ಸೇರಿದಂತೆ ಇತರರ ಅಸ್ಥಿಪಂಜರವನ್ನು ವಶಪಡಿಸಿಕೊಂಡಿದ್ದರು.

2005ರಲ್ಲಿ ನೋಯ್ಡಾದ ಸೆಕ್ಟರ್ 31ರಲ್ಲಿ ಇರುವ ಕೊಲಿಯ ಉದ್ಯೋಗದಾತ ಮೊಂನೀದರ್ ಸಿಂಗ್ ಪಂದೇರ್ ಮನೆ ಹೊರಗಿಂದ ಬಾಲಕಿ ಕಾಣೆಯಾಗಿದ್ದಳು. ಈ ಸಂಬಂಧ ಆಕೆಯ ತಂದೆ ಸ್ಥಳೀಯ ಪೊಲೀಸರಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಪಂಧೇರ್ ಹಾಗೂ ಕೋಲಿಯನ್ನು ಬಂಧನಕ್ಕೊಳಪಡಿಸಿದ್ದ ಪೊಲೀಸರು, ಪರಿಶೀಲನೆ ವೇಳೆ ಪಂಧೇರ್ ಅವರ ಮನೆಯ ಚರಂಡಿಯಲ್ಲಿ ನಾಪತ್ತೆಯಾದ ಬಾಲಕಿ ಸೇರಿದಂತೆ ಇತರರ ಅಸ್ಥಿಪಂಜರಗಳನ್ನು ವಶಪಡಿಸಿಕೊಂಡಿದ್ದರು.

ಈ ಅಸ್ಥಿಪಂಚರಗಳು ಈ ಪ್ರದೇಶದಿಂದ ನಾಪತ್ತೆಯಾಗಿದ್ದ ಬಡ ಮಕ್ಕಳು ಹಾಗೂ ಯುವತರಿಯರದ್ದಾಗಿದ್ದು ಎಂದು ತಿಳಿದುಬಂದಿತ್ತು.

ಅಸ್ಥಿಪಂಚರಗಳು ಪತ್ತೆಯಾದ 10 ದಿನಗಳಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ಇದಾದ ಬಳಿಕ ಮತ್ತಷ್ಟು ಅಸ್ಥಿಪಂಜರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!