ದೇಶ

ಸಲಿಂಗ ವಿವಾಹ ಮಾಡಿಸಿದ ಸಿಖ್ ಪುರೋಹಿತಗೆ ಅನರ್ಹತೆಯ ಶಿಕ್ಷೆ!

Srinivas Rao BV

ಚಂಡೀಗಢ: ಕಳೆದ ತಿಂಗಳು ಸಲಿಂಗ ವಿವಾಹ ಮಾಡಿಸಿದ್ದ ಸಿಖ್ ಪುರೋಹಿತರನ್ನು ಅಖಾಲ್ ತಖ್ತ್ ಅನರ್ಹಗೊಳಿಸಿದೆ.
 
ಬಟಿಂಡಾ ಗುರುದ್ವಾರದಲ್ಲಿ ಧಾರ್ಮಿಕ ಸೇವೆಗಳನ್ನು ಸಲ್ಲಿಸುವುದರಿಂದ ಈ ಅರ್ಚಕರಿಗೆ ನಿರ್ಬಂಧ ವಿಧಿಸಲಾಗಿದೆ. 

ಪಂಜ್ ಸಿಂಗ್ ಸಹಿಬಾನ್ಸ್ (ಪಂಚ ಸಿಖ್ ಧರ್ಮಗುರುಗಳು) ಅಮೃತಸರದಲ್ಲಿ ಸಭೆ ನಡೆಸಿ, ಸಿಖ್ ಧರ್ಮದ ಸರ್ವೋಚ್ಛ ಧಾರ್ಮಿಕ ವ್ಯವಸ್ಥೆಯಾಗಿರುವ ಅಕಾಲ್ ತಖ್ತ್ ಜತೇದಾರ್ ಈ ಆದೇಶ ಪ್ರಕಟಿಸಿದ್ದಾರೆ.

ಬಟಿಂಡಾ ಜಿಲ್ಲೆಯ ಗುರುದ್ವಾರ ಕಲ್ಗಿಧರ್ ಸಾಹಿಬ್ ದಲ್ಲಿ ಇಬ್ಬರು ಮಹಿಳೆಯರು ಸೆ.18 ರಂದು ವಿವಾಹವಾಗಿದ್ದರು. ಇದರ ನಂತರ, ಅಕಾಲ್ ತಖ್ತ್ ಗುರುದ್ವಾರದ 'ಗ್ರಂಥಿಗಳು' (ಸಿಖ್ ಪುರೋಹಿತರು), ನಿರ್ವಹಣೆ ಮತ್ತು ಗುರ್ಬಾನಿ ಪ್ರತಿಪಾದಕರನ್ನು ಅಮಾನತುಗೊಳಿಸಲಾಗಿತ್ತು. ಅಕಾಲ್ ತಖ್ತ್ ಜತೇದಾರ್ ಗಿಯಾನಿ ರಘ್ಬೀರ್ ಸಿಂಗ್ ಅವರು ಸಿಖ್ ತತ್ವಗಳ ಅಡಿಯಲ್ಲಿ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ ಎಂದು ಹೇಳಿ ಧಾರ್ಮಿಕ ಸೇವೆಗಳನ್ನು ಮಾಡಲು ಪುರೋಹಿತರನ್ನು ಅನರ್ಹಗೊಳಿಸಿದ್ದಾರೆ.

ವಿಶೇಷ ವಿವಾಹ ಕಾಯಿದೆ (Special Marriage Act)ಗೆ ಸಂಬಂಧಪಟ್ಟಂತೆ ಕಾನೂನು ರೂಪಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಅದನ್ನು ನಾವು ವ್ಯಾಖ್ಯಾನಿಸಬಹುದು, ಆದರೆ ಅದನ್ನು ಬದಲಾಯಿಸುವುದು ಸಂಸತ್ತು ಅಂದರೆ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅ.17 ರ ತಮ್ಮ ತೀರ್ಪಿನಲ್ಲಿ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

SCROLL FOR NEXT