ರಾಜಮಹೇಂದ್ರವರಂ: ಆಂಧ್ರ ಪ್ರದೇಶದ ಕೌಶಲ್ಯ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ ನಿಂದ ತಾತ್ಕಾಲಿಕ ಜಾಮೀನು ಪಡೆದಿರುವ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಮಂಗಳವಾರ ಇಲ್ಲಿನ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದರು.
53 ದಿನಗಳ ಜೈಲುವಾಸ ಮುಗಿಸಿ ಸಂಜೆ 4-20ಕ್ಕೆ ಜೈಲಿನಿಂದ ಹೊರ ಬಂದ ಅವರನ್ನು ಕುಟುಂಬಸ್ಥರು, ಪಕ್ಷದ ಮುಖಂಡರು, ಕಾರ್ಯಕರ್ತರು ಬರಮಾಡಿಕೊಂಡರು. ಜೈಲಿನ ಹೊರಗೆ ಸೇರಿದ್ದ ಸಾವಿರಾರು ಕಾರ್ಯಕರ್ತರು, ಟಿಡಿಪಿ ಧ್ವಜ ಹಾರಿಸುವ ಮೂಲಕ ನಾಯ್ಡು ಅವರಿಗೆ ಅದ್ದೂರಿ ಸ್ವಾಗತ ಕೋರಿದರು.
ಇದನ್ನೂ ಓದಿ: ಕೌಶಲ್ಯಾಭಿವೃದ್ಧಿ ಯೋಜನೆ ಹಗರಣ: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಮಧ್ಯಂತರ ಜಾಮೀನು ಮಂಜೂರು
ಇಂದು ಬೆಳಗ್ಗೆ ಆಂಧ್ರ ಪ್ರದೇಶ ಹೈಕೋರ್ಟ್ ಅವರಿಗೆ ಅನಾರೋಗ್ಯ ನಿಮಿತ್ತ ನಾಲ್ಕು ವಾರಗಳ ಜಾಮೀನು ಮಂಜೂರು ಮಾಡಿತ್ತು. ನವೆಂಬರ್ 28 ರಂದು ಅಥವಾ ಅದರ ಒಳಗಾಗಿ ರಾಜಮಹೇಂದ್ರವರಂ ಜೈಲು ವರಿಷ್ಠಾಧಿಕಾರಿ ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.