ದೇಶ

ವಿವಿಪ್ಯಾಟ್‌ನೊಂದಿಗೆ ಇವಿಎಂಗಳ ಕ್ರಾಸ್-ವೆರಿಫಿಕೇಶನ್ ಕೋರಿ ಪಿಐಎಲ್: ತುರ್ತು ವಿಚಾರಣೆ ಇಲ್ಲ ಎಂದ ಸುಪ್ರೀಂ

Lingaraj Badiger

ನವದೆಹಲಿ: ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್‌) ಮೂಲಕ ಮತದಾರರು ಚಲಾಯಿಸಿದ ಮತಗಳ ಅಡ್ಡ ಪರಿಶೀಲನೆ ಕೋರಿ ಎನ್‌ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ನವೆಂಬರ್‌ಗೆ ಮುಂದೂಡಿದೆ.

ಎನ್‌ಜಿಒ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್‌ ಭೂಷಣ್‌, ಚುನಾವಣೆ ಸಮೀಪಿಸುತ್ತಿರುವ ಕಾರಣ ತುರ್ತು ಅಗತ್ಯ ಇದೆ ಎಂದು ವಾದಿಸಿದರು. ಇದರಲ್ಲಿ ಯಾವುದೇ ತುರ್ತು ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠ, ಪ್ರಕರಣವನ್ನು ಮುಂದೂಡಿದೆ.

"ಪ್ರಶಾಂತ್ ಭೂಷಣ್, ಈ ಸಮಸ್ಯೆಯನ್ನು ಎಷ್ಟು ಬಾರಿ ಎತ್ತುತ್ತಾರೆ? ಪ್ರತಿ ಆರು ತಿಂಗಳಿಗೊಮ್ಮೆ, ಈ ವಿಷಯವನ್ನು ಹೊಸದಾಗಿ ಪ್ರಸ್ತಾಪಿಸಲಾಗುತ್ತದೆ. ಇದರಲ್ಲಿ ಯಾವುದೇ ತುರ್ತು ಅಗತ್ಯ ಇಲ್ಲ. ಇದು ಸರಿಯಾದ ಸಮಯದಲ್ಲಿ ಬರಲಿ...  ವಿಚಾರಣೆಯನ್ನು ನವೆಂಬರ್ ತಿಂಗಳಲ್ಲಿ ಪಟ್ಟಿ ಮಾಡಿ’’ ಎಂದು ಪೀಠ ಹೇಳಿದೆ.

ಜುಲೈ 17 ರಂದು ಎನ್‌ಜಿಒ ಸಲ್ಲಿಸಿದ್ದ ಪಿಐಎಲ್ ಗೆ ಭಾರತೀಯ ಚುನಾವಣಾ ಆಯೋಗದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೇಳಿದೆ.

ತ್ವರಿತ ಅರ್ಜಿಯಲ್ಲಿ, NGO ಮತದಾರರು ತಮ್ಮ ಮತವನ್ನು ಚಲಾಯಿಸಿದ ನಂತರ ಅದನ್ನು VVPAT ಗಳ ಮೂಲಕ ಪರಿಶೀಲಿಸಲು ಸಾಧ್ಯವಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದೆ.

SCROLL FOR NEXT