ಸಾಂದರ್ಭಿಕ ಚಿತ್ರ 
ದೇಶ

G20 ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವ ನಾಯಕರ ಮುಂದೆ 78 ವಾದ್ಯಗಾರರ ಮೇಳದಿಂದ ಪ್ರದರ್ಶನ

ದೇಶದ ಶ್ರೀಮಂತ ಸಂಗೀತ ಪರಂಪರೆಯನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ವಿವಿಧ ಶೈಲಿಯ ಶಾಸ್ತ್ರೀಯ ಮತ್ತು ಸಮಕಾಲೀನ ಸಂಗೀತವನ್ನು ಪ್ರದರ್ಶಿಸುತ್ತಿರುವ ಕಲಾಕಾರರ ಮೇಳವು ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವ ನಾಯಕರ ಮುಂದೆ ಪ್ರದರ್ಶನ ನೀಡಲಿದೆ.

ನವದೆಹಲಿ: ದೇಶದ ಶ್ರೀಮಂತ ಸಂಗೀತ ಪರಂಪರೆಯನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ವಿವಿಧ ಶೈಲಿಯ ಶಾಸ್ತ್ರೀಯ ಮತ್ತು ಸಮಕಾಲೀನ ಸಂಗೀತವನ್ನು ಪ್ರದರ್ಶಿಸುತ್ತಿರುವ ಕಲಾಕಾರರ ಮೇಳವು ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವ ನಾಯಕರ ಮುಂದೆ ಪ್ರದರ್ಶನ ನೀಡಲಿದೆ.

ಸೆಪ್ಟೆಂಬರ್ 9ರಂದು ಜಿ20 ನಾಯಕರ ಗೌರವಾರ್ಥ ಅಧ್ಯಕ್ಷ ದ್ರೌಪದಿ ಮುರ್ಮು ಆಯೋಜಿಸುವ ಔಪಚಾರಿಕ ಭೋಜನಕೂಟದಲ್ಲಿ 'ಗಾಂಧರ್ವ ಆಟೋದ್ಯಮ್' ಗುಂಪಿನಿಂದ 'ಭಾರತ ವಾದ್ಯ ದರ್ಶನಂ', ಮ್ಯೂಸಿಕಲ್ ಜರ್ನಿ ಆಫ್ ಇಂಡಿಯಾ ಪ್ರದರ್ಶನವನ್ನು ಪ್ರದರ್ಶಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಗೀತ ನಾಟಕ ಅಕಾಡೆಮಿಯು ಪರಿಕಲ್ಪನೆ ಮಾಡಿರುವ ಸಂತೂರ್, ಸಾರಂಗಿ, ಜಲ ತರಂಗ್ ಮತ್ತು ಶೆಹನಾಯ್ ಮುಂತಾದ ಭಾರತೀಯ ಶಾಸ್ತ್ರೀಯ ಸಂಗೀತ ವಾದ್ಯಗಳನ್ನು ಇದು ಒಳಗೊಂಡಿರುತ್ತದೆ. ಈ ಮೇಳವು 'ಅನನ್ಯ ಮತ್ತು ನೆಲದ ಸಂಗೀತ ಪ್ರಸ್ತುತಿ, ಸಂಗೀತದ ಮೂಲಕ ಭಾರತದ ಸಾಮರಸ್ಯದ ಪ್ರಯಾಣ ಎಂದು ಅಧಿಕೃತ ಕರಪತ್ರದಲ್ಲಿ ಬರೆಯಲಾಗಿದೆ.

ಇದೇ ವೇಳೆ ಕೆಲವು ಪ್ರಮುಖ ಶೈಲಿಗಳಲ್ಲಿ ಹಿಂದೂಸ್ತಾನಿ, ಕರ್ನಾಟಕ ಜಾನಪದ ಮತ್ತು ಸಮಕಾಲೀನ ಸಂಗೀತವನ್ನು ಪ್ರದರ್ಶಿಲಾಗುತ್ತದೆ. ಈ ಪ್ರಾತಿನಿಧಿಕ ಸಂಗೀತದ ಮೂಲಕ ಭಾರತದ ಎಲ್ಲಾ ಭಾಗಗಳ ಸಂಗೀತವನ್ನು ಬಿಂಬಿಸಲಾಗುತ್ತದೆ. ದೇಶಾದ್ಯಂತದ 78 ಸಾಂಪ್ರದಾಯಿಕ ವಾದ್ಯಗಾರರ ಮೇಳವು 'ಗಾಂಧರ್ವ ಆಟೋದ್ಯಮ್' ನಲ್ಲಿ ನಡೆಯುತ್ತದೆ.

ಮೇಳವು ಭಾರತದಾದ್ಯಂತ 34 ಹಿಂದೂಸ್ತಾನಿ ಸಂಗೀತ ವಾದ್ಯಗಳು, 18 ಕರ್ನಾಟಕ ಸಂಗೀತ ವಾದ್ಯಗಳು ಮತ್ತು 26 ಜಾನಪದ ಸಂಗೀತ ವಾದ್ಯಗಳನ್ನು ಒಳಗೊಂಡಿದೆ. 78 ಕಲಾವಿದರಲ್ಲಿ 11 ಮಕ್ಕಳು, 13 ಮಹಿಳೆಯರು, ಆರು ಅಂಗವಿಕಲ (ದಿವ್ಯಾಂಗ್) ಕಲಾವಿದರು, 26 ಯುವಕರು ಮತ್ತು 22 ವೃತ್ತಿಪರರು ಸೇರಿದ್ದಾರೆ ಎಂದು ಕರಪತ್ರದಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT