ದೇಶ

ಜಿ20 ಶೃಂಗಸಭೆ: ರಾಜಸ್ಥಾನ ಸಿಎಂ ಗೆಹ್ಲೋಟ್ ಹೆಲಿಕಾಪ್ಟರ್ ಗೆ ಅನುಮತಿ ನಿರಾಕರಿಸಿದ ಕೇಂದ್ರ

Lingaraj Badiger

ಜೈಪುರ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೆಲಿಕಾಪ್ಟರ್‌ ನಲ್ಲಿ ಉದಯಪುರದಿಂದ ಸಿಕಾರ್‌ಗೆ ಹೋಗಲು ಅನುಮತಿ ನಿರಾಕರಿಸಿದೆ.

ಗೆಹ್ಲೋಟ್ ಅವರು ಬಾಬಾ ಶ್ರೀ ಖಿನ್ವಾದಾಸ್ ಜಿ ಮಹಾರಾಜ್ ಅವರ ಪುಣ್ಯತಿಥಿ ಕಾರ್ಯಕ್ರಮದ ಅಂಗವಾಗಿ ಸಿಕಾರ್‌ನಲ್ಲಿರುವ ಸಾಂಗ್ಲಿಯಾ ಪೀಠಕ್ಕೆ ಭೇಟಿ ನೀಡಬೇಕಿತ್ತು. ಆದರೆ ಹೆಲಿಕಾಪ್ಟರ್‌ ಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

"ಇಂದು ಬಾಬಾ ಶ್ರೀ ಖಿನ್ವಾದಾಸ್ ಜಿ ಮಹಾರಾಜ್ ಅವರ ಪುಣ್ಯತಿಥಿ ಕಾರ್ಯಕ್ರಮದ ಅಂಗವಾಗಿ ಸಿಕರ್‌ನ ಸಾಂಗ್ಲಿಯಾ ಪೀಠಕ್ಕೆ ಹೋಗುವ ಕಾರ್ಯಕ್ರಮವಿತ್ತು. ಆದರೆ ಜಿ-20 ಸಭೆಯ ಕಾರಣ, ಕೇಂದ್ರ ಗೃಹ ಸಚಿವಾಲಯ ಉದಯಪುರದಿಂದ ಹೆಲಿಕಾಪ್ಟರ್‌ನಲ್ಲಿ ಸಿಕಾರ್‌ಗೆ ಹೋಗಲು ಅನುಮತಿ ನೀಡಿಲ್ಲ. ಇಂದು ನಾನು ಸಾಂಗ್ಲಿಯಾ ಪೀಠಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಸಾಂಗ್ಲಿಯಾ ಪೀಠದ ಪೀಠಾಧೀಶ್ವರ ಶ್ರೀ ಓಂ ದಾಸ್ ಮಹಾರಾಜ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮಾಹಿತಿ ನೀಡಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.

SCROLL FOR NEXT