ದೇಶ

ಕೇರಳದಲ್ಲಿ ಪತ್ತೆಯಾಗಿರುವ ನಿಫಾ ವೈರಾಣು ಬಾಂಗ್ಲಾದೇಶದ್ದು; ಕಡಿಮೆ ಸಾಂಕ್ರಾಮಿಕ, ಮರಣದ ಪ್ರಮಾಣ ಹೆಚ್ಚು!

Srinivas Rao BV

ತಿರುವನಂತಪುರ: ಕೇರಳದಲ್ಲಿ ಪತ್ತೆಯಾಗಿರುವ ನಿಫಾ ವೈರಾಣು ಬಾಂಗ್ಲಾದೇಶದ್ದಾಗಿದ್ದು, ಕಡಿಮೆ ಸಾಂಕ್ರಾಮಿಕ ಎಂದು ತಿಳಿದುಬಂದಿದೆ. 

ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್ಐವಿ) ಪುಣೆಯ ತಂಡ ಕೇರಳಕ್ಕೆ ಆಗಮಿಸಲಿದ್ದು, ಮೊಬೈಲ್ ಲ್ಯಾಬ್ ನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಿ ನಿಫಾ ವೈರಾಣು ಸೋಂಕು ಮಾದರಿಗಳನ್ನು ಸಂಗ್ರಹಿಸಲಿದೆ ಎಂದು ಕೇರಳ ರಾಜ್ಯ ಸರ್ಕಾರ ಹೇಳಿದೆ. ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಾಲ್ವರಿಗೆ ನಿಫಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ವಿಧಾನಸಭೆಯಲ್ಲಿ ನಿಫಾ ಸೋಂಕಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್, ಕೇರಳದಲ್ಲಿ ಕಂಡುಬರುವ ವೈರಾಣು ಮಾದರಿ ಬಾಂಗ್ಲಾದೇಶದ ರೂಪಾಂತರವಾಗಿದ್ದು ಅದು ಮನುಷ್ಯರಿಂದ ಮನುಷ್ಯನಿಗೆ ಹರಡುತ್ತದೆ ಮತ್ತು ಇದು ಕಡಿಮೆ ಸಾಂಕ್ರಾಮಿಕವಾಗಿದ್ದರೂ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ ಎಂದು ಹೇಳಿದ್ದಾರೆ.

SCROLL FOR NEXT