ದೇಶ

ಸನಾತನ ಧರ್ಮ ನಾಶ "ಘಮಾಂಡಿಯಾ" INDIA ಮೈತ್ರಿಕೂಟದ ಅಜೆಂಡಾ: ಪ್ರಧಾನಿ ಮೋದಿ

Nagaraja AB

ಬಿನಾ: ವಿರೋಧಪಕ್ಷಗಳ INDIA ಮೈತ್ರಿಕೂಟವನ್ನು "ಘಮಾಂಡಿಯಾ" (ಅಹಂಕಾರಿ) ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ, ಸನಾತನ ಧರ್ಮವನ್ನು ನಾಶ ಅವುಗಳ ಅಜೆಂಡಾವಾಗಿದೆ ಎಂದು ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಿನಾ ರಿಫೈನರಿಯಲ್ಲಿ 49,000 ಕೋಟಿ ರೂಪಾಯಿ ವೆಚ್ಚದ ಪೆಟ್ರೋಕೆಮಿಕಲ್ಸ್ ಸಂಕೀರ್ಣಕ್ಕೆ ಶಂಕುಸ್ಥಾಪನೆ ಮತ್ತು  10 ಕೈಗಾರಿಕಾ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಇತ್ತೀಚಿಗೆ ಮುಂಬೈಯಲ್ಲಿ ಸಭೆ ನಡೆಸಿದ 'ಘಮಾಂಡಿಯಾ' INDIA ಮೈತ್ರಿಕೂಟದ ನಾಯಕರಿಗೆ ಯಾವುದೇ ನೀತಿ, ವಿಚಾರಗಳು ಅಥವಾ ನಾಯಕನೂ ಇಲ್ಲ. ನಾತನ ಧರ್ಮದ ಮೇಲೆ ದಾಳಿ ಮಾಡುವ ಗುಪ್ತ ಅಜೆಂಡಾವನ್ನು ಹೊಂದಿದ್ದಾರೆ, ಅದನ್ನು ಅವರು ನಾಶಮಾಡಲು ಬಯಸುತ್ತಿದ್ದಾರೆ ಎಂದು ಟೀಕಿಸಿದರು. 

ಸನಾತನ ಧರ್ಮ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು ಎಂಬ ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಟೀಕೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ  INDIA ಮೈತ್ರಿಕೂಟದ ವಿರುದ್ಧ ಈ ರೀತಿಯಲ್ಲಿ ವಾಗ್ದಾಳಿ ನಡೆಸಿದರು. ಜಿ-20 ಶೃಂಗಸಭೆಯ ಯಶಸ್ಸನ್ನು ಭಾರತದ 140 ಕೋಟಿ ಜನರಿಗೆ ಸಲ್ಲಿಸಿದ ಪ್ರಧಾನಿ ಮೋದಿ, ಇದು ದೇಶ ಮತ್ತು ಜನರ ಹೆಮ್ಮೆ ಹೆಚ್ಚಿಸಿದೆ ಎಂದರು. 

ಮಧ್ಯ ಪ್ರದೇಶವನ್ನು ದೀರ್ಘಕಾಲ ಆಳಿದ ಕಾಂಗ್ರೆಸ್ ಭ್ರಷ್ಟಾಚಾರ ಮತ್ತು ಅಪರಾಧವನ್ನು ಹೊರತುಪಡಿಸಿ ಬೇರೇನೂ ಮಾಡಲಿಲ್ಲ. ಬಿಜೆಪಿ ಸರ್ಕಾರ  ದೇಶದಲ್ಲಿ 75 ಲಕ್ಷ ಹೊಸ ಗ್ಯಾಸ್ ಸಂಪರ್ಕಗಳನ್ನು ನೀಡಲಿದೆ. ಮಧ್ಯಪ್ರದೇಶದಲ್ಲಿ 50,000 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ ಎಂದು ಅವರು ತಿಳಿಸಿದರು. 

SCROLL FOR NEXT