ದೇಶ

ಒಬಿಸಿ ಕೋಟಾ ಇಲ್ಲದೆ ಮಹಿಳಾ ಮೀಸಲಾತಿ ಮಸೂದೆ ಅಪೂರ್ಣ: ಲೋಕಸಭೆಯಲ್ಲಿ ರಾಹುಲ್ ಗಾಂಧಿ

Lingaraj Badiger

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಆದರೆ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡದ ಕಾರಣ ಇದು "ಅಪೂರ್ಣ" ಮಸೂದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಳಿದ್ದಾರೆ ಮತ್ತು ಜಾತಿ ಗಣತಿಗೆ ಒತ್ತಾಯಿಸಿದ್ದಾರೆ.

ಇಂದು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ವಯನಾಡ್ ಸಂಸದ, ಮಹಿಳೆಯರಿಗೆ ಅಧಿಕಾರ ನೀಡುವ ವಿಚಾರದಲ್ಲಿ ಪ್ರಸ್ತುತ ಮಸೂದೆ ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು.

‘ಮಹಿಳಾ ಮೀಸಲಾತಿ ಮಸೂದೆಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ’ ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.

"ಇದು (ಮಹಿಳಾ ಮೀಸಲಾತಿ ಮಸೂದೆ) ಒಂದು ದೊಡ್ಡ ಹೆಜ್ಜೆ ಮತ್ತು ಇದನ್ನು ಪ್ರತಿಪಕ್ಷಗಳು ಸೇರಿದಂತೆ ಎಲ್ಲರೂ ಬೆಂಬಲಿಸುತ್ತಾರೆ. ಇದು ನಮ್ಮ ದೇಶದ ಮಹಿಳೆಯರಿಗೆ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಆದರೆ ಒಬಿಸಿ ಮೀಸಲಾತಿ ಇಲ್ಲದೆ ಮಸೂದೆ ಅಪೂರ್ಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಮಸೂದೆಯನ್ನು ತಕ್ಷಣವೇ ಜಾರಿಗೆ ತರಬೇಕು. ಈ ಮಸೂದೆಯನ್ನು ಜಾರಿಗೆ ತರಲು ನಿಮಗೆ ಹೊಸ ಜನಗಣತಿ, ಡಿಲಿಮಿಟೇಶನ್ ಅಗತ್ಯವಿದೆ ಎಂಬ ಕಲ್ಪನೆಯೇ ವಿಚಿತ್ರವಾಗಿದೆ... ಈ ಮಸೂದೆಯನ್ನು ಇಂದೇ ಜಾರಿಗೆ ತರಬಹುದು" ಎಂದು ಕಾಂಗ್ರೆಸ್ ನಾಯಕ ಹೇಳಿದರು.

SCROLL FOR NEXT