ದೇಶ

ಸಂಸತ್ ಭವನದ ಹೊರಗೆ ಮಹಿಳಾ ಸಂಸದರೊಂದಿಗೆ ಪೋಸ್ ನೀಡಿದ ಪ್ರಧಾನಿ ನರೇಂದ್ರ ಮೋದಿ! ವಿಡಿಯೋ

Nagaraja AB

ನವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ನಾರಿ ಶಕ್ತಿ'ಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಗುರುವಾರ ರಾತ್ರಿ ರಾಜ್ಯಸಭೆಯಲ್ಲಿ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹಿಳಾ ಸಂಸದರು ಪಕ್ಷ ಬೇಧ ಮರೆತು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಸಂಸತ್ ಭವನದ ಹೊರಗೆ ಮಹಿಳಾ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೋಸ್ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವೆ ನಾವು ಯಾವಾಗಲೂ 'ಮೋದಿ ಹೈ ತೋ ಮಮ್ಕಿನ್ ಹೈ' ಎಂದು ಹೇಳುತ್ತಿದ್ದೆವು, ಇಂದು ಅವರು ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಹೇಳಿದರು. 

ರಾಜ್ಯಸಭಾ ಸಂಸದೆ ನಟಿ ಶಬಾನಾ ಅಜ್ಮಿ ಮಾತನಾಡಿ,  ಮಹಿಳಾ ಮೀಸಲಾತಿ ಹಲವಾರು ವರ್ಷಗಳಿಂದ ಮಹಿಳೆಯರಿಂದ ಬೇಡಿಕೆಯಾಗಿತ್ತು, ಇದು ಸಂತೋಷದ ವಿಷಯ ಮತ್ತು ಇದನ್ನು ಪ್ರಶಂಸಿಸಲೇಬೇಕು ಎಂದು ಹೇಳಿದರು. 

ಇದಕ್ಕೂ ಮುನ್ನಾ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕ ಪಯಣದಲ್ಲಿ ನಿರ್ಣಾಯಕ ಕ್ಷಣ. 140 ಕೋಟಿ ಭಾರತೀಯರಿಗೆ ಅಭಿನಂದನೆಗಳು. ನಾರಿ ಶಕ್ತಿ ವಂದನ್ ಅಧಿನಿಯಮಕ್ಕೆ ಮತ ಹಾಕಿದ ಎಲ್ಲಾ ರಾಜ್ಯಸಭಾ ಸಂಸದರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇಂತಹ ಒಮ್ಮತದ ಬೆಂಬಲ ನಿಜಕ್ಕೂ ಸಂತಸ ತಂದಿದೆ ಎಂದಿದ್ದಾರೆ.

ಸಂಸತ್ತಿನಲ್ಲಿ ನಾರಿ ಶಕ್ತಿ ವಂದನ್ ಅಧಿನಿಯಮ್ ಅಂಗೀಕಾರದೊಂದಿಗೆ, ದೇಶದ ಮಹಿಳೆಯರಿಗೆ ಬಲವಾದ ಪ್ರಾತಿನಿಧ್ಯ ಮತ್ತು ಸಬಲೀಕರಣದ ಯುಗ ಪ್ರಾರಂಭಿಸುತ್ತೇವೆ. ಇದು ಕೇವಲ ಶಾಸನವಲ್ಲ; ಇದು ನಮ್ಮ ದೇಶವನ್ನು ನಿರ್ಮಿಸಿದ ಅಸಂಖ್ಯಾತ ಮಹಿಳೆಯರಿಗೆ ಗೌರವವಾಗಿದೆ. ಅವರ ಸ್ವಾವಲಂಬನೆ ಮತ್ತು ಕೊಡುಗೆಗಳಿಂದ ಭಾರತವನ್ನು ಶ್ರೀಮಂತಗೊಳಿಸಲಾಗಿದೆ. ನಾವು ಇಂದು ನಮ್ಮ ರಾಷ್ಟ್ರದ ಎಲ್ಲಾ ಮಹಿಳೆಯರ ಶಕ್ತಿ, ಧೈರ್ಯ ಮತ್ತು ಅದಮ್ಯ ಮನೋಭಾವವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅವರ ಧ್ವನಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೇಳುವ ಚಾರಿತ್ರಿಕ ಹೆಜ್ಜೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

SCROLL FOR NEXT