ಪ್ರಗ್ಯಾನ್ ರೋವರ್-ವಿಕ್ರಮ್ ಲ್ಯಾಂಡರ್ 
ದೇಶ

ಚಂದ್ರಯಾನ-3: ನಿದ್ರೆಯಿಂದ ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಎಬ್ಬಿಸುವ ಮೊದಲ ಯತ್ನ ವಿಫಲ, ಆದರೂ ಛಲಬಿಡದ ವಿಜ್ಞಾನಿಗಳು!

ಚಂದ್ರಯಾನ 3ರ 14 ದಿನಗಳ ಯಶಸ್ವಿ ಕಾರ್ಯಾಚರಣೆ ಬಳಿಕ 14 ದಿನಗಳ ಸುದೀರ್ಘ ನಿದ್ರೆಗೆ ಜಾರಿದ್ದ ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಗಳನ್ನು ಎಬ್ಬಿಸುವ ಮೊದಲ ಪ್ರಯತ್ನ ವಿಫಲವಾಗಿದೆ.

ಬೆಂಗಳೂರು: ಚಂದ್ರಯಾನ 3ರ 14 ದಿನಗಳ ಯಶಸ್ವಿ ಕಾರ್ಯಾಚರಣೆ ಬಳಿಕ 14 ದಿನಗಳ ಸುದೀರ್ಘ ನಿದ್ರೆಗೆ ಜಾರಿದ್ದ ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಗಳನ್ನು ಎಬ್ಬಿಸುವ ಮೊದಲ ಪ್ರಯತ್ನ ವಿಫಲವಾಗಿದೆ.

ಶುಕ್ರವಾರ ಚಂದ್ರನ ಮೇಲಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಗೆ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರದಿಂದ ವಿಜ್ಞಾನಿಗಳು ಸಂದೇಶ ರವಾನಿಸಿದ್ದು, ಈ ಸಂದೇಶಕ್ಕೆ ಲ್ಯಾಂಡರ್ ಮತ್ತು ರೋವರ್ ನಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದುಬಂದಿದೆ. ಚಂದ್ರನ ಮೇಲೆ ಇಳಿದಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್‌ ರೋವರ್ ಜತೆಗಿನ ಸಂಪರ್ಕ ಮರುಸ್ಥಾಪಿಸಲು ಇಸ್ರೋ ಶುಕ್ರವಾರ ಪ್ರಯತ್ನಿಸಿತು. ಇದು ಫಲಕೊಟ್ಟಿಲ್ಲ. ಆದರೂ, ಸಂರ್ಪಕ ಸಾಧನೆಯ ಪ್ರಯತ್ನ ಮುಂದುವರಿದಿದೆ.

ಚಂದ್ರಯಾನ 3ರ (Chandrayaan 3) ಲ್ಯಾಂಡರ್ ಮತ್ತು ರೋವರ್ ಅನ್ನು ಪುನಃ ಸಕ್ರಿಯಗೊಳಿಸುವ ಪ್ರಯತ್ನಕ್ಕೆ ಶುಕ್ರವಾರ (ಸೆ.22) ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದಾಗ್ಯೂ, ಪ್ರಯತ್ನ ಮುಂದುವರಿದಿದೆ. ಚಂದ್ರಯಾನ 3ರ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ಜತೆಗೆ ಸಂಪರ್ಕ ಸಾಧಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೇಳಿದೆ. 

ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನ ಎಚ್ಚರ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಂಪರ್ಕ ಸಾಧಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಸದ್ಯಕ್ಕೆ ಅವುಗಳಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ. ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಟ್ವಿಟರ್ ನಲ್ಲಿ ಇಸ್ರೋ ಹೇಳಿಕೊಂಡಿದೆ.

ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ಎರಡನ್ನೂ ಸೆಪ್ಟೆಂಬರ್ 2 ರಂದು "ಸುರಕ್ಷಿತವಾಗಿ ನಿಲ್ಲಿಸಲಾಯಿತು" ಮತ್ತು ಚಂದ್ರನ ರಾತ್ರಿ ಪ್ರಾರಂಭವಾದ ನಂತರ ಸ್ಲೀಪ್ ಮೋಡ್‌ನಲ್ಲಿ ಇರಿಸಲಾಗಿತ್ತು. ಚಂದ್ರನ ಮೇಲೆ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮನಾಗಿರುತ್ತದೆ.

-200 ಡಿಗ್ರಿ ತಾಪಮಾನದಿಂದ ನೌಕೆಗಳನ್ನು ಪುನಃ ಕಾರ್ಯಾಚರಣೆಗಿಳಿಸುವುದು ಕಷ್ಟಕರ
ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಸುಮಾರು ಎರಡು ವಾರಗಳಿಂದ ಗಾಢ ನಿದ್ದೆಯಲ್ಲಿವೆ. ಇದು ಬಹುತೇಕ ಫ್ರೀಜರ್‌ನಲ್ಲಿಟ್ಟು ಬಳಿಕ ಪರೀಕ್ಷಿಸಿ ಅದನ್ನು ಬಳಸಲು ಪ್ರಯತ್ನಿಸುವಂತಿದೆ. ತಾಪಮಾನವು -150 ಡಿಗ್ರಿ ಸೆಲ್ಸಿಯಸ್ ಮೀರಿ ಹೋಗುವ ವಾತಾವರಣ ಅದು. ಆ ಪರಿಸ್ಥಿತಿಯಲ್ಲಿ ಬ್ಯಾಟರಿ, ಇಲೆಕ್ಟ್ರೋನಿಕ್ಸ್ ಮತ್ತು ಆ ಮೆಕಾನಿಸಂ ಹೇಗೆ ಉಳಿಯಲು ಸಾಧ್ಯ ಎಂದು ಇಸ್ರೋದ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್ ಕಳವಳ ವ್ಯಕ್ತಪಡಿಸಿದರು. 

ಆದಾಗ್ಯೂ, ವಿಕ್ರಮ್ ಮತ್ತು ಪ್ರಜ್ಞಾನ್‌ ಸಂಪರ್ಕದ ಆಸೆ ಕೈಬಿಟ್ಟಿಲ್ಲ. ಸಹಜವಾಗಿ, ಅಂತಹ ಸ್ಥಿತಿಯ ನಂತರವೂ ಅದು ಕಾರ್ಯನಿರ್ವಹಿಸುತ್ತದೆ ಎಂದು ಸ್ಥಾಪಿಸಲು ಸಾಕಷ್ಟು ಪರೀಕ್ಷೆಗಳನ್ನು ನೆಲದ ಮೇಲೆ ಮಾಡಲಾಗಿದೆ. ಆದರೂ, ನಮ್ಮ ಕಳವಳ ಮೀರಿ ಮುನ್ನಡೆಯಬೇಕು. ಸೌರ ಶಾಖವು ಉಪಕರಣಗಳನ್ನು ಮತ್ತು ಚಾರ್ಜರ್ ಬ್ಯಾಟರಿಗಳನ್ನು ಬೆಚ್ಚಗಾಗಿಸುತ್ತದೆ. ಈ ಎರಡೂ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರೈಸಿದರೆ, ಸಿಸ್ಟಮ್ ಮತ್ತೆ ಕಾರ್ಯನಿರ್ವಹಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.

ಒಮ್ಮೆ ಇದು ಕಾರ್ಯಗತಗೊಂಡರೆ, ಮುಂದಿನ 14 ದಿನಗಳಲ್ಲಿ ನಾವು ಸ್ವಲ್ಪ ದೂರದವರೆಗೆ ಚಲಿಸಬಹುದು ಮತ್ತು ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯಲ್ಲಿ ಹೆಚ್ಚಿನ ಡೇಟಾವನ್ನು ಸಂಗ್ರಹಿಸಬಹುದು ಎಂದು ಅವರು ವಿವರಿಸಿದರು.

ಪ್ರಾಥಮಿಕ ಗುರಿ ಸಂಪೂರ್ಣವಾಗಿ ಸಾಧಿಸಿರುವ ಚಂದ್ರಯಾನ3 ಯೋಜನೆ
ಭಾರತದ ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಸ್ಪರ್ಶಿಸಿತು. ಅದಾಗಿ, ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ನ ಚಂದ್ರಯಾನ-3 ಮಿಷನ್‌ನ ಮುಖ್ಯ ಉದ್ದೇಶಗಳಲ್ಲಿ ಒಂದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಬಳಿಕ 14 ದಿನಗಳ ಕಾಲ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಕಾರ್ಯ ನಿರ್ವಹಣೆ ಮಾಡಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT