ದೇಶ

ಗುಜರಾತ್: ಭೋಗವೋ ನದಿ ಮೇಲ್ಸೇತುವೆ ಕುಸಿತ: ನಾಲ್ವರಿಗೆ ಗಾಯ

Srinivas Rao BV

ಅಹ್ಮದಾಬಾದ್:ಗುಜರಾತ್ ನ ಭೋಗವೋ ನದಿ ಮೇಲ್ಸೇತುವೆ ಕುಸಿದಿದ್ದು,  ನಾಲ್ವರಿಗೆ ಗಾಯಗಳಾಗಿವೆ. ಭೋಗವೋ ನದಿಯ ಮೇಲ್ಸೇತುವೆ ಹಳೆಯ ಮೇಲ್ಸೇತುವೆಯಾಗಿದ್ದು, 40 ಟನ್ ಡಂಪರ್ ಪಂಚಾಯತ್ ರಸ್ತೆಯಲ್ಲಿರುವ ಮೇಲ್ಸೇತುವೆ ಮೇಲೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಪ್ರದೇಶದಲ್ಲಿ ಬೃಹತ್ ವಾಹನಗಳ ಸಂಚಾರ ನಿಷೇಧಿಸಲಾಗಿದ್ದರೂ ಡಂಪರ್ ಸಂಚರಿಸುತ್ತಿತ್ತು. ಘಟನೆ ನಡೆದಾಗ ಡಂಪರ್ ಜೊತೆಗೆ ಎರಡು ಮೋಟರ್ ಸೈಕಲ್ ಗಳೂ ಈ ಪ್ರದೇಶದಲ್ಲಿ ಸಂಚರಿಸುತಿತ್ತು. ಘಟನೆಯಲ್ಲಿ ನಾಲ್ವರು ವ್ಯಕ್ತಿಗಳಿಗೆ ಗಾಯಗಳಾಗಿವೆ ಎಂದು ಸುರೇಂದ್ರ ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕೆಸಿ ಸಂಪತ್ ಹೇಳಿದ್ದಾರೆ.

 
ಬೃಹತ್ ವಾಹನ ನದಿಗೆ ಬಿದ್ದಿದೆ. ಈ ಮೇಲ್ಸೇತುವೆ ನಾಲ್ಕು ದಶಕಗಳಷ್ಟು ಹಳೆಯದಾಗಿದ್ದು, ರಾಜ್ಯ ರಸ್ತೆ ಹಾಗೂ ಕಟ್ಟಡ ಇಲಾಖೆಗಳ ವ್ಯಾಪ್ತಿಯಲ್ಲಿ ನಿರ್ವಹಣೆಯಾಗುತ್ತಿತ್ತು. ಭಾರಿ ವಾಹನಗಳ ಓಡಾಟ ತಡೆಯಲು ಎಚ್ಚರಿಕೆ ಫಲಕ ಹಾಕಲಾಗಿದ್ದು, ಸೇತುವೆಗೆ ಬ್ಯಾರಿಕೇಡ್ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಬ್ಯಾರಿಕೇಡ್‌ಗಳ ಹೊರತಾಗಿಯೂ, 40 ಟನ್ ಡಂಪರ್ ಸೇತುವೆಯನ್ನು ದಾಟಲು ಪ್ರಯತ್ನಿಸಿತು, ಅದರ ಮೊದಲ ಸ್ಲ್ಯಾಬ್‌ನ ಕುಸಿತಕ್ಕೆ ಕಾರಣವಾಯಿತು" ಎಂದು ಕಲೆಕ್ಟರ್ ಹೇಳಿದ್ದಾರೆ. ಹೊಸ ಸೇತುವೆಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

SCROLL FOR NEXT