ದೇಶ

ತೆಲಂಗಾಣ ಕಾಂಗ್ರೆಸ್‌ಗೆ ಹಣ ನೀಡಲು ಕರ್ನಾಟಕ ಸರ್ಕಾರದಿಂದ 'ಚುನಾವಣಾ' ತೆರಿಗೆ: ಬಿಆರ್‌ಎಸ್

Lingaraj Badiger

ಹೈದರಾಬಾದ್: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಬಿಲ್ಡರ್‌ಗಳ ಮೇಲೆ "ಚುನಾವಣಾ ತೆರಿಗೆ" ವಿಧಿಸುತ್ತಿದೆ ಎಂದು ತೆಲಂಗಾಣ ಸಚಿವ ಮತ್ತು ಬಿಆರ್‌ಎಸ್ ನಾಯಕ ಕೆಟಿ ರಾಮರಾವ್ ಅವರು ಶನಿವಾರ ಆರೋಪಿಸಿದ್ದಾರೆ.

"ಇದು ಸ್ಪಷ್ಟವಾಗಿ ಗೋಚರವಾಗುತ್ತಿದೆ, ಕರ್ನಾಟಕದ ಹೊಸದಾಗಿ ಚುನಾಯಿತ ಕಾಂಗ್ರೆಸ್ ಸರ್ಕಾರವು ತೆಲಂಗಾಣ ಕಾಂಗ್ರೆಸ್‌ಗೆ ಹಣ ನೀಡಲು ಬೆಂಗಳೂರಿನ ಬಿಲ್ಡರ್‌ಗಳಿಗೆ ಪ್ರತಿ ಚದರ ಅಡಿಗೆ 500 ರೂಪಾಯಿ ಚುನಾವಣಾ ತೆರಿಗೆಯನ್ನು ವಿಧಿಸಲು ಪ್ರಾರಂಭಿಸಿದೆ" ಎಂದು ಬಿಆರ್‌ಎಸ್ ನಾಯಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಹಳೆಯ ಅಭ್ಯಾಸಗಳು ಸತ್ತುಹೋಗುವುದು ಕಷ್ಟ. ಗ್ರ್ಯಾಂಡ್ ಓಲ್ಡ್ ಪಾರ್ಟಿ ಹಗರಣಗಳ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅದಕ್ಕಾಗಿಯೇ ಅದನ್ನು ಸ್ಕ್ಯಾಮ್‌ಗ್ರೆಸ್ ಎಂದು ಮರುನಾಮಕರಣ ಮಾಡಲಾಗಿದೆ" ಎಂದು ಕೆಟಿ ರಾಮರಾವ್ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಅವರು ಎಷ್ಟೇ ಹಣವನ್ನು ಸುರಿದರೂ ತೆಲಂಗಾಣದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ತೆಲಂಗಾಣದಲ್ಲಿ ಜನ SCAMGRESSಗೆ ಮನ್ನಣೆ ನೀಡುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಈ ವರ್ಷಾಂತ್ಯಕ್ಕೆ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ, ಆಡಳಿತಾರೂಢ ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

SCROLL FOR NEXT