ಟ್ರಕ್ ಚಾಲಕರು
ಟ್ರಕ್ ಚಾಲಕರು 
ದೇಶ

ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಬಳಸಿದ ಕಂಟೈನರ್‌ಗಳಿಗೆ ಬಾಕಿ ಇನ್ನೂ ಪಾವತಿಸಿಲ್ಲ!

Ramyashree GN

ಬುಲಂದ್‌ಶಹರ್: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಟ್ರಕ್ ಚಾಲಕರ ಗುಂಪೊಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಬಳಸಲಾದ ಕಂಟೈನರ್‌ಗಳ ಬಾಕಿ ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ. ಕಂಟೈನರ್‌ಗಳು ಸಾರಿಗೆ ಸಂಸ್ಥೆಯೊಂದಕ್ಕೆ ಸೇರಿದವುಗಳಾಗಿವೆ.

ನೊಂದ ಟ್ರಕ್ ಚಾಲಕಾರದ ಮೋತಿ ಸಿಂಗ್, ಸತ್ಯೇಂದ್ರ ಸಿಂಗ್, ಧರ್ಮೇಂದ್ರ ಸಿಂಗ್ ಮತ್ತು ಅನುಪ್‌ಶಹರ್‌ನ ರಾಮ್ ಕ್ರಿಶನ್ ಈಗ ಪರಿಹಾರ ಕೋರಿ ಸ್ಥಳೀಯ ಪೊಲೀಸ್ ಠಾಣೆಯ ಪ್ರಭಾರ ಠಾಣೆಗೆ ಪತ್ರ ಬರೆದಿದ್ದಾರೆ.

ದೆಹಲಿಯ ಹರಿದ್ವಾರ ಸಾರಿಗೆ ಸಂಸ್ಥೆಯ ಮನೋಜ್ ಕುಮಾರ್ ಮತ್ತು ಅನಿಲ್ ಕೌಶಿಕ್ ಅವರಿಗೆ ಸೇರಿದ 25 ಕಂಟೈನರ್‌ಗಳನ್ನು ತಡೆಹಿಡಿದಿದ್ದೇವೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಹುಲ್ ಗಾಂಧಿ ಕೈಗೊಂಡಿದ್ದ ರ್ಯಾಲಿಗಾಗಿ ಈ ಕಂಟೈನರ್‌ಗಳನ್ನು ತೆಗೆದುಕೊಂಡು ಹೋಗಲಾಗಿತ್ತು. ಈ ವಿಚಾರದಲ್ಲಿ ಪೊಲೀಸ್ ಅಧಿಕಾರಿ ಮಧ್ಯಪ್ರವೇಶಿಸಿ ಬಾಕಿ ಹಣವನ್ನು ಪಾವತಿಸಿ ಕಂಟೈನರ್‌ಗಳನ್ನು ಮಾಲೀಕರಿಗೆ ಹಿಂತಿರುಗಿಸುವಂತೆ ಅವರು ಒತ್ತಾಯಿಸಿದ್ದಾರೆ.

ಮೂಲಗಳ ಪ್ರಕಾರ, ಟ್ರಕ್‌ಗಳಿಗೆ ಹಣವನ್ನು ಕಾಂಗ್ರೆಸ್ ಇನ್ನೂ ಪಾವತಿಸಿಲ್ಲ ಎಂದು ಹೇಳಿವೆ.

ಈಗ ಹಣ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಸಂತ್ರಸ್ತರು ಬೆದರಿಕೆ ಹಾಕಿದ್ದಾರೆ. ಯುಪಿಸಿಸಿ ವಕ್ತಾರರನ್ನು ಸಂಪರ್ಕಿಸಿದಾಗ, ಈ ವಿಷಯದ ಬಗ್ಗೆ ನನಗೆ ತಿಳಿದಿಲ್ಲ ಮತ್ತು ದೆಹಲಿಯಲ್ಲಿರುವ ಪಕ್ಷದ ನಾಯಕರನ್ನು ಸಂಪರ್ಕಿಸಬೇಕು ಎಂದು ಹೇಳಿದರು.

SCROLL FOR NEXT