ಅಭಿಷೇಕ್ ಮನು ಸಿಂಘ್ವಿ 
ದೇಶ

ರಾಜ್ಯಸಭಾ ಚುನಾವಣೆಯಲ್ಲಿ ಡ್ರಾ ಮೂಲಕ ಸೋಲು: ಸಿಂಘ್ವಿ ಹೈಕೋರ್ಟ್ ಮೊರೆ

ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಚುನಾವಣೆಯಲ್ಲಿ ಸೋತ ವಾರಗಳ ನಂತರ, ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಶನಿವಾರ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಚುನಾವಣೆಯಲ್ಲಿ ಟೈ ಆದ ನಂತರ ಚುನಾವಣಾಧಿಕಾರಿಯ ಡ್ರಾ ನಿಯಮಗಳ ವ್ಯಾಖ್ಯಾನವನ್ನು ಪ್ರಶ್ನಿಸಿದ್ದಾರೆ.

ಶಿಮ್ಲಾ: ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಚುನಾವಣೆಯಲ್ಲಿ ಸೋತ ವಾರಗಳ ನಂತರ, ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಶನಿವಾರ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಚುನಾವಣೆಯಲ್ಲಿ ಟೈ ಆದ ನಂತರ ಚುನಾವಣಾಧಿಕಾರಿಯ ಡ್ರಾ ನಿಯಮಗಳ ವ್ಯಾಖ್ಯಾನವನ್ನು ಪ್ರಶ್ನಿಸಿದ್ದಾರೆ.

ಫೆಬ್ರವರಿ 27 ರಂದು ನಡೆದ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ತಲಾ 34 ಮತಗಳನ್ನು ಪಡೆದ ನಂತರ ಚುನಾವಣಾಧಿಕಾರಿ ಡ್ರಾ ನಿಯಮ ಮೂಲಕ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಅವರ ಗೆಲುವನ್ನು ಘೋಷಿಸಿದ್ದರು.

ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಘ್ವಿ, ಡ್ರಾ ಮೂಲಕ ಸೋತವರನ್ನು ಚುನಾವಣೆಯಲ್ಲಿ ಸೋತರು ಎಂದು ಹೇಳುವುದಕ್ಕೆ "ಕಾನೂನಲ್ಲಾಗಲೀ, ಕಾಯಿದೆಯಲ್ಲಾಗಲೀ ಅಥವಾ ನಿಯಮಗಳಲ್ಲಾಗಲೀ ಇಲ್ಲ ಎಂದು ಹೇಳಿದರು.

ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಸದಸ್ಯರ ಬಲ ಮತ್ತು ಮೂವರು ಪಕ್ಷೇತರರ ಬೆಂಬಲವನ್ನು ಹೊಂದಿದ್ದರೂ, ಆರು ಕಾಂಗ್ರೆಸ್ ಬಂಡಾಯ ಶಾಸಕರು ಹಾಗೂ ಮೂವರು ಪಕ್ಷೇತರರು, ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಪರವಾಗಿ ಮತ ಚಲಾಯಿಸಿದ್ದರಿಂದ ಇಬ್ಬರೂ ಅಭ್ಯರ್ಥಿಗಳು ತಲಾ 34 ಮತಗಳನ್ನು ಪಡೆದಿದ್ದರು. ಹೀಗಾಗಿ ವಿಜೇತರನ್ನು ಡ್ರಾ ಮೂಲಕ ಘೋಷಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹೊಸ ಸುಂಕ ನೀತಿಗೆ ಅಮೆರಿಕದಲ್ಲೇ ಭಾರಿ ವಿರೋಧ: ಭಾರತ ಸೇರಿ 59 ದೇಶಗಳ ಪರ ನಿಂತ 25 ರಾಜ್ಯಗಳು; ಟ್ರಂಪ್ ಸರ್ಕಾರಕ್ಕೆ ಕಾನೂನು ಸಂಕಷ್ಟ..!

West Asia War: ಒಪ್ಪಂದಕ್ಕೆ ಬರ್ತೀರಾ? ಇತಿಹಾಸ ಸೇರ್ತೀರಾ?; ಇರಾನ್‌ಗೆ ಟ್ರಂಪ್ ಲಾಸ್ಟ್ ವಾರ್ನಿಂಗ್..!

"ನನಗೊಬ್ಬ ಪಾಕಿಸ್ತಾನಿ ಹುಡುಗನನ್ನು ಹುಡುಕಿ ಕೊಡಿ" ಸಂಘಿ ಹೇಳಿಕೆ ಬೆನ್ನಲ್ಲೇ ಕಂಗನಾ ರಣಾವತ್ ಹಳೆಯ VIDEO ವೈರಲ್!

ಹೊಸ ಮುಖಗಳ ನಿರೀಕ್ಷೆ ಹುಸಿ; ಡಿಕೆಶಿ ಸಂಪುಟದಲ್ಲಿ ಹಿರಿಯರ ಪ್ರಾಬಲ್ಯ, ಅನುಭವಿಗಳಿಗೆ ಮಣೆ ಹಾಕಿದ ಹೈಕಮಾಂಡ್..!

ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ವರದಿ ನೀಡಲು ನೂತನ ಸಚಿವರಿಗೆ ಸೂಚನೆ: ಸಿದ್ದುಗೆ ಯಾವುದೇ ಅಸಮಾಧಾನವಿಲ್ಲ, ತಮಿಳುನಾಡಿಗೆ ಕಾನೂನು ಮೂಲಕವೇ ಉತ್ತರ- ಸಿಎಂ ಡಿಕೆ ಶಿವಕುಮಾರ್