ಆಪ್ ನಾಯಕರಿಂದ ಉಪವಾಸ ಸತ್ಯಾಗ್ರಹ
ಆಪ್ ನಾಯಕರಿಂದ ಉಪವಾಸ ಸತ್ಯಾಗ್ರಹ 
ದೇಶ

ದೆಹಲಿ ಸಿಎಂ ಕೇಜ್ರಿವಾಲ್ ಬಂಧನ ಖಂಡಿಸಿ ಆಪ್ ನಾಯಕರಿಂದ ಉಪವಾಸ ಸತ್ಯಾಗ್ರಹ

Lingaraj Badiger

ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷದ(ಎಎಪಿ) ಉನ್ನತ ನಾಯಕರು ಭಾನುವಾರ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಡೆಪ್ಯೂಟಿ ಸ್ಪೀಕರ್ ರಾಖಿ ಬಿಲಾ, ಸಚಿವರಾದ ಅತಿಶಿ, ಗೋಪಾಲ್ ರೈ ಮತ್ತು ಇಮ್ರಾನ್ ಹುಸೇನ್ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಸೇರಿದಂತೆ ಹಿರಿಯ ಎಎಪಿ ನಾಯಕರು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಬೆಳಗ್ಗೆ 11 ಗಂಟೆಯಿಂದ ದಿನವಿಡೀ ನಡೆದ 'ಸಾಮೂಹಿಕ ಉಪವಾಸ'ದಲ್ಲಿ ಭಾಗವಹಿಸಿದ್ದರು.

ಎಎಪಿ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯವು ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿಸಿದ್ದು, ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏತನ್ಮಧ್ಯೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

ದೆಹಲಿ ಸಿಎಂ ಬಂಧನ ಖಂಡಿಸಿ ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಭಾರತೀಯರು ಬೋಸ್ಟನ್‌ನ ಹಾರ್ವರ್ಡ್ ಸ್ಕ್ವೇರ್, ಲಾಸ್ ಏಂಜಲೀಸ್‌ನಲ್ಲಿರುವ ಹಾಲಿವುಡ್ ಸೈನ್, ವಾಷಿಂಗ್ಟನ್, ನ್ಯೂಯಾರ್ಕ್, ಟೊರೊಂಟೊ, ಲಂಡನ್ ಮತ್ತು ಮೆಲ್ಬೋರ್ನ್‌ನ ಟೈಮ್ಸ್ ಸ್ಕ್ವೇರ್‌ ಸೇರಿದಂತೆ ಹಲವು ಕಡೆ ಪ್ರತಿಭಟನೆ ನಡೆಸಲಾಗಿದೆ ಎಂದು ಆಪ್ ಮುಖಂಡರು ಹೇಳಿದ್ದಾರೆ.

SCROLL FOR NEXT