ಒಮರ್ ಅಬ್ದುಲ್ಲಾ -  ಸಲ್ಮಾನ್ ಖುರ್ಷಿದ್
ಒಮರ್ ಅಬ್ದುಲ್ಲಾ - ಸಲ್ಮಾನ್ ಖುರ್ಷಿದ್ 
ದೇಶ

ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಸೀಟು ಹಂಚಿಕೆ ಅಂತಿಮ: ಕಾಶ್ಮೀರದಲ್ಲಿ ತಲಾ 3 ಕ್ಷೇತ್ರಗಳಲ್ಲಿ ಸ್ಪರ್ಧೆ

Lingaraj Badiger

ನವದೆಹಲಿ: ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸೋಮವಾರ ಕೊನೆಗೂ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ತಲಾ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು, ಉಧಂಪುರ, ಜಮ್ಮು ಮತ್ತು ಲಡಾಖ್ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದ್ದು, ಅನಂತನಾಗ್, ಶ್ರೀನಗರ ಮತ್ತು ಬಾರಾಮುಲ್ಲಾದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದರು.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಎರಡು ಪಕ್ಷಗಳಿಗೆ ತಲಾ ಮೂವರು ಅಭ್ಯರ್ಥಿಗಳೊಂದಿಗೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಜಂಟಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ ಎಂದು ಅಬ್ದುಲ್ಲಾ ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಜನರ ಆಕಾಂಕ್ಷೆಗಳನ್ನು ಪೂರೈಸಲು ಮತ್ತು ಸಂಸತ್ತಿನಲ್ಲಿ ಅವರನ್ನು ನಿಜವಾಗಿಯೂ ಪ್ರತಿನಿಧಿಸಲು ಸಹಾಯ ಮಾಡಲು ಇಂಡಿಯಾ ಮೈತ್ರಿಕೂಟ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ" ಎಂದು ಅವರು ಹೇಳಿದರು.

ಕಾಂಗ್ರೆಸ್ ಮತ್ತು ಎನ್‌ಸಿ ನಾಯಕರ ನಡುವೆ ಸಮಾಲೋಚನೆಯ ನಂತರ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮಾಯಕ ಸಲ್ಮಾನ್ ಖುರ್ಷಿದ್ ಕೂಡ ಉಪಸ್ಥಿತರಿದ್ದರು.

ಪಿಡಿಪಿ ಇನ್ನೂ ಇಂಡಿಯಾ ಮೈತ್ರಿಕೂಟದ ಭಾಗವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಖುರ್ಷಿದ್, "ಪಿಡಿಪಿ ನಮ್ಮ ಮೈತ್ರಿಯಲ್ಲಿದೆ. ಸೀಟು ಹಂಚಿಕೆ ಮೈತ್ರಿಯ ಒಂದು ಭಾಗವಾಗಿದೆ ಮತ್ತು ಒಟ್ಟಾರೆ ಮೈತ್ರಿ ವಿಭಿನ್ನ ವಿಷಯವಾಗಿದೆ" ಎಂದರು.

SCROLL FOR NEXT