ಬಾಬಾ ರಾಮ್ ದೇವ್-ಆಚಾರ್ಯ ಬಾಲಕೃಷ್ಣ
ಬಾಬಾ ರಾಮ್ ದೇವ್-ಆಚಾರ್ಯ ಬಾಲಕೃಷ್ಣ 
ದೇಶ

Patanjali Case: ಸುಪ್ರೀಂ ಕೋರ್ಟ್ ಗೆ 'ಬೇಷರತ್ ಕ್ಷಮೆ' ಕೇಳಿದ ಬಾಬಾ ರಾಮ್ ದೇವ್, ಆಚಾರ್ಯ ಬಾಲಕೃಷ್ಣ

Srinivasamurthy VN

ನವದೆಹಲಿ: ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಯೋಗಗುರು ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಮಂಗಳವಾರ ಸುಪ್ರೀಂ ಕೋರ್ಟ್ ಗೆ 'ಬೇಷರತ್ ಕ್ಷಮೆ' ಕೇಳಿದ್ದಾರೆ.

ಈ ಹಿಂದೆ ಯೋಗ ಗುರು ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ (MD) ಆಚಾರ್ಯ ಬಾಲಕೃಷ್ಣ ಅವರು ಸಲ್ಲಿಕೆ ಮಾಡಿದ್ದ ಅಸ್ಪಷ್ಟ ಮತ್ತು ಅಸಂಬದ್ಧ ಅಫಿಡವಿಟ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿತ್ತು. ಅಂದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ಇಬ್ಬರಿಗೂ ಛೀಮಾರಿ ಹಾಕಿ ಸೂಕ್ತ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಮತ್ತೊಂದು ಕೊನೆಯ ಅವಕಾಶವನ್ನು ನೀಡಿ ವಿಚಾರಣೆಯನ್ನು ಮುಂದೂಡಿತ್ತು.

ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ಭರವಸೆಯನ್ನು ಪಾಲಿಸದಿದ್ದಕ್ಕಾಗಿ ಸುಪ್ರಿಂ ಕೋರ್ಟ್​​ ಮುಂದೆ ಯೋಗ ಗುರು ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಬೇಷರತ್​​ ಕ್ಷಮೆಯಾಚಿಸಿದ್ದಾರೆ. ಕ್ಷಮೆಯಾಚನೆಯನ್ನು ಶನಿವಾರವೇ ಸಲ್ಲಿಸಲಾಗಿದ್ದು, ಸುಪ್ರೀಂ ಕೋರ್ಟ್ ಈ ವಿಷಯವನ್ನು ನಾಳೆ ಮತ್ತೆ ವಿಚಾರಣೆಗೆ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.

ಖುದ್ದು ಹಾಜರಾತಿಗೆ ಸೂಚನೆ

ಇನ್ನು ನಾಳಿನ ವಿಚಾರಣೆಗೂ ಯೋಗ ಗುರು ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಕೇಳಲಾಗಿದೆ.

SCROLL FOR NEXT