ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ TNIE
ದೇಶ

ಜೈಲಿನಿಂದ ಸರ್ಕಾರ ನಡೆಸುತ್ತಿದ್ದಾರಾ ಕೇಜ್ರಿವಾಲ್?: ತಿಹಾರ್ ಜೈಲಿನ ಅಧಿಕಾರಿಗಳು ಈ ಬಗ್ಗೆ ಹೇಳಿದ್ದು...

Srinivas Rao BV

ತಿಹಾರ್: ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಿಂದಲೇ ಸರ್ಕಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ತಿಹಾರ್ ಜೈಲಿನ ಡಿಜಿ ಸಂಜಯ್ ವನಿವಾಲ್ ಸ್ಪಷ್ಟನೆ ನೀಡಿದ್ದು, ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೇಜ್ರಿವಾಲ್ ಗೆ ಕೇವಲ 2 ರೀತಿಯ ಡಾಕ್ಯುಮೆಂಟ್ ಗಳಿಗೆ ಸಹಿ ಹಾಕುವುದಕ್ಕೆ ಅವಕಾಶವಿದೆ. ಆದರೆ ಅವು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ.

ಕಾನೂನಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳಿಗೆ ಮಾತ್ರವೇ ಜೈಲಿನಲ್ಲಿರುವವರು ಸಹಿ ಹಾಕಬಹುದು ಎಂದು ಡಿಜಿ ಸಂಜಯ್ ವನಿವಾಲ್ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ನಾಯಕರು, ಕೇಜ್ರಿವಾಲ್ ಜೈಲಿನಿಂದಲೇ ಸರ್ಕಾರ ನಡೆಸುತ್ತಿದ್ದಾರೆ, ಮುಂದಿನ ವಾರದಿಂದ ಸಿಎಂ ಪ್ರತಿ ವಾರವೂ ಇಬ್ಬರು ಸಚಿವರನ್ನು ಕರೆದು ಭೇಟಿ ಮಾಡಲಿದ್ದು, ಅವರ ಇಲಾಖೆಯ ಪ್ರಗತಿಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಎಎಪಿ ನಾಯಕ ಡಾ. ಸಂದೀಪ್ ಪಾಠಕ್ ಅವರು ಕೇಜ್ರಿವಾಲ್ ಅವರು ಇಲಾಖೆಯ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಕೆಲಸ-ಸಂಬಂಧಿತ ವಿಷಯಗಳ ಬಗ್ಗೆ ಮಂತ್ರಿಗಳಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದ್ದರು.

SCROLL FOR NEXT