ಬಾಲ ರಾಮ ರಾಮಲಲ್ಲಾನ ಮೇಲೆ ಸೂರ್ಯರಶ್ಮಿ
ಬಾಲ ರಾಮ ರಾಮಲಲ್ಲಾನ ಮೇಲೆ ಸೂರ್ಯರಶ್ಮಿ  
ದೇಶ

ರಾಮ ನವಮಿ: ಅಯೋಧ್ಯೆ ಬಾಲ ರಾಮನ ಹಣೆ ಬೆಳಗಿದ 'ಸೂರ್ಯ ತಿಲಕ'

Sumana Upadhyaya

ಅಯೋಧ್ಯೆ: ಅಯೋಧ್ಯೆ ರಾಮ ಮಂದಿರ ಇಂದು ರಾಮ ನವಮಿ ದಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ರಾಮ ಮಂದಿರ ನಿರ್ಮಾಣವಾದ ನಂತರ ಇದೆ ಮೊದಲ ಬಾರಿ ಅಯೋಧ್ಯೆಯಲ್ಲಿ ರಾಮ ನವಮಿ ಆಚರಣೆ ನೆರವೇರಿದ್ದು, ಈ ಸಂದರ್ಭದಲ್ಲಿ ಬಾಲರಾಮನ ವಿಗ್ರಹ ರಾಮಲಲ್ಲಾನ ಹಣೆಯ ಮೇಲೆ ಸೂರ್ಯರಶ್ಮಿ ನೇರವಾಗಿ ಸ್ಪರ್ಶಿಸಿದೆ.

ಕಳೆದ ಜನವರಿ 22ರಂದು ಮಂದಿರ ನಿರ್ಮಾಣವಾಗಿ ಬಾಲ ರಾಮನ ಪ್ರತಿಷ್ಠೆ ಅದ್ದೂರಿಯಾಗಿ ಸಂಪ್ರದಾಯಗಳೊಂದಿಗೆ ನೆರವೇರಿತ್ತು. ರಾಮ ಲಲ್ಲಾ ಪ್ರತಿಷ್ಠಾಪನೆ ಹಾಗೂ ಉದ್ಘಾಟನೆ ನಂತರ ಮೊದಲ ರಾಮ ನವಮಿಯನ್ನು ಆಚರಣೆ ಇಂದು ನೆರವೇರಿತು. ಈ ಸಮಯದಲ್ಲಿ ಬಾಲ ರಾಮನ ಮೇಲೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ.

ಸೂರ್ಯರಶ್ಮಿ ನೇರವಾಗಿ ಬಾಲರಾಮನ ಹಣೆಗೆ ಬೀಳುವಂತೆ ಮಾಡಲು ಈ ಹಿಂದೆ ವಿಜ್ಞಾನಿಗಳು ಒಂದು ಪ್ರಯೋಗವನ್ನು ನಡೆಸಿದ್ದು ಅದು ಯಶಸ್ವಿಯಾಗಿದೆ. ಸೂರ್ಯರಶ್ಮಿ ರಾಮನನ್ನು ಸ್ಪರ್ಶ ಮಾಡುವ ಸಮಯದಲ್ಲಿ ರಾಮ ಭಕ್ತರಿಗೆ ಮಂದಿರದೊಳಗೆ ಅವಕಾಶ ನೀಡಲಾಗಿದೆ. ದೇವಾಲಯದ ಟ್ರಸ್ಟ್‌ನಿಂದ ಸುಮಾರು 100 ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದ್ದು, ಸರ್ಕಾರದಿಂದ 50 ರಾಮನವಮಿ ಆಚರಣೆ ಲೈವ್​​​​ ಸ್ಕ್ರೀನ್​​ ನೋಡಲು ವ್ಯವಸ್ಥೆ ಮಾಡಲಾಗಿತ್ತು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಹೇಳಿದ್ದಾರೆ.

SCROLL FOR NEXT