ಶರದ್ ಪವಾರ್, ಪ್ರಧಾನಿ ಮೋದಿ
ಶರದ್ ಪವಾರ್, ಪ್ರಧಾನಿ ಮೋದಿ 
ದೇಶ

ಮಾಜಿ ಪ್ರಧಾನಿಗಳು ನವ ಭಾರತ ನಿರ್ಮಿಸಲು ಶ್ರಮಿಸಿದರು, ಹಾಲಿ ಪ್ರಧಾನಿ ಇತರರನ್ನು ಟೀಕಿಸುವುದರಲ್ಲೇ 10 ವರ್ಷ ಕಳೆದರು: ಶರದ್ ಪವಾರ್

Lingaraj Badiger

ಅಮರಾವತಿ: ಮಾಜಿ ಪ್ರಧಾನಿಗಳು ನವ ಭಾರತ ನಿರ್ಮಾಣಕ್ಕೆ ಶ್ರಮಿಸಿದ್ದರು. ಆದರೆ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಇತರರನ್ನು ಟೀಕಿಸುವುದರಲ್ಲೇ ಹತ್ತು ವರ್ಷ ಕಳೆದರು. ಹೀಗಾಗಿ ತಮ್ಮ ಸರ್ಕಾರ ಜನರಿಗೆ ಏನು ಮಾಡಿದೆ ಎಂಬುದರ ಬಗ್ಗೆ ಮಾತನಾಡುವುದಿಲ್ಲ ಎಂದು ಎನ್‌ಸಿಪಿ (ಎಸ್‌ಪಿ)ನಾಯಕ ಶರದ್ ಪವಾರ್ ಅವರು ಸೋಮವಾರ ಹೇಳಿದ್ದಾರೆ.

ಇಂದು ಅಮರಾವತಿಯಲ್ಲಿ ಮಹಾ ವಿಕಾಸ್ ಅಘಾಡಿ ಅಭ್ಯರ್ಥಿ ಪರ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್, ದೇಶಕ್ಕೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಕೊಡುಗೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ ಎಂದರು.

ಕೆಲವು ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಆದರೆ ಭಾರತದಲ್ಲಿ ನಿರಂಕುಶಾಧಿಕಾರವು ರೂಪುಗೊಳ್ಳಲು ಅವಕಾಶ ನೀಡದಂತೆ ಜನರಿಗೆ ಮನವಿ ಮಾಡಿದರು.

ಪ್ರಧಾನಿ ಮೋದಿ ಅವರು ಜನರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಾಮಿರ್ ಪುಟಿನ್ ಅವರನ್ನು ಅನುಕರಿಸಲು ಯತ್ನಿಸುತ್ತಿದ್ದಾರೆ ಎಂದು ಪವಾರ್ ಆರೋಪಿಸಿದ್ದಾರೆ.

"ಪಂಡಿತ್ ಜವಾಹರಲಾಲ್ ನೆಹರು ನಂತರ, ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ನರಸಿಂಹರಾವ್‌ನಿಂದ ಹಿಡಿದು ಮನಮೋಹನ್ ಸಿಂಗ್‌ವರೆಗಿನ ಎಲ್ಲಾ ಪ್ರಧಾನಿಗಳ ಕೆಲಸವನ್ನು ನಾನು ನೋಡಿದ್ದೇನೆ. ಅವರ ಪ್ರಯತ್ನ ನವ ಭಾರತ ನಿರ್ಮಿಸುವುದಾಗಿತ್ತು. ಆದರೆ ಪ್ರಸ್ತುತ ಅಧಿಕಾರದಲ್ಲಿರುವ ಪ್ರಧಾನಿ ಇತರರನ್ನು ಮಾತ್ರ ಟೀಕಿಸುತ್ತಾರೆ" ಎಂದು ಪವಾರ್ ಹೇಳಿದರು.

SCROLL FOR NEXT