ಅಖಿಲೇಶ್ ಯಾದವ್
ಅಖಿಲೇಶ್ ಯಾದವ್ 
ದೇಶ

ಲೋಕಸಭೆ ಚುನಾವಣೆ: ಎಸ್ ಪಿ ಅಭ್ಯರ್ಥಿ ಬದಲಾವಣೆ, ಕನ್ನೌಜ್‌ನಿಂದ ಅಖಿಲೇಶ್ ಯಾದವ್ ಕಣಕ್ಕೆ

Lingaraj Badiger

ಲಖನೌ: ಸಮಾಜವಾದಿ ಪಕ್ಷ(ಎಸ್ ಪಿ) ಉತ್ತರ ಪ್ರದೇಶದ ಕನ್ನೌಜ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡಿದ್ದು, ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಕನೌಜ್‌ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಬುಧವಾರ ಘೋಷಿಸಿದೆ.

ಅಖಿಲೇಶ್ ಯಾದವ್ ಅವರು ಗುರುವಾರ ಕನ್ನೌಜ್‌ನಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಎಸ್ ಪಿ ತಿಳಿಸಿದೆ.

"ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ನಾಳೆ ಮಧ್ಯಾಹ್ನ 12 ಗಂಟೆಗೆ ಕನ್ನೌಜ್ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ" ಎಂದು ಸಮಾಜವಾದಿ ಪಕ್ಷ ಇಂದು ಸಂಜೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಜಿಲ್ಲಾ ಘಟಕದ ಒತ್ತಾಯದ ಮೇರೆಗೆ ಅಖಿಲೇಶ್ ಯಾದವ್ ಅವರು ಕನೌಜ್‌ನಿಂದ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಂಗಳವಾರ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಅಖಿಲೇಶ್ ಯಾದವ್ ಸ್ಪರ್ಧೆಯನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ.

ಕಳೆದ ಸೋಮವಾರ, ಎಸ್‌ಪಿ ತೇಜ್ ಪ್ರತಾಪ್ ಯಾದವ್ ಅವರು ಕನ್ನೌಜ್ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿತ್ತು.

ಇದಕ್ಕೂ ಮುನ್ನ ಪಕ್ಷದ ಅಭ್ಯರ್ಥಿ ಬದಲಾವಣೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅಖಿಲೇಶ್ ಯಾದವ್ ಅವರು, ‘ನಾಮಪತ್ರ ಸಲ್ಲಿಕೆಗೂ ಮುನ್ನವೇ ಎಲ್ಲವೂ ಸ್ಪಷ್ಟವಾಗುತ್ತದೆ’ ಎಂದಿದ್ದರು.

SCROLL FOR NEXT