ಬಿಹಾರದಲ್ಲಿ ಸಿಡಿಲು 
ದೇಶ

Lightning strikes: ಬಿಹಾರದಲ್ಲಿ ಮತ್ತೆ ಸಿಡಿಲು ಬಡಿದು 12 ಮಂದಿ ಸಾವು

ಬಿಹಾರದಲ್ಲಿ ಮತ್ತೆ ಸಿಡಿಲಿಗೆ 12 ಮಂದಿ ಸಾವನ್ನಪ್ಪಿದ್ದು, ಕೇವಲ 1 ತಿಂಗಳ ಅಂತರದಲ್ಲಿ 2ನೇ ಘಟನೆ ಇದಾಗಿದೆ.

ಪಾಟ್ನಾ: ಬಿಹಾರದಲ್ಲಿ ಮತ್ತೆ ಸಿಡಿಲಿಗೆ 12 ಮಂದಿ ಸಾವನ್ನಪ್ಪಿದ್ದು, ಕೇವಲ 1 ತಿಂಗಳ ಅಂತರದಲ್ಲಿ 2ನೇ ಘಟನೆ ಇದಾಗಿದೆ.

ಹೌದು.. ಕಳೆದ 24 ಗಂಟೆಗಳ ಅಂತರದಲ್ಲಿ ಬಿಹಾರದ ನಾಲ್ಕು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಒಟ್ಟು 12 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬಿಹಾರ ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದ್ದು, ಗಯಾದಲ್ಲಿ ಐದು ಸಾವುಗಳು, ಜೆಹಾನಾಬಾದ್ (3), ಮತ್ತು ನಳಂದಾ ಮತ್ತು ರೋಹ್ತಾಸ್ ತಲಾ ಇಬ್ಬರು ಸಿಡಿಲು ಬಡಿತದಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.

ಇನ್ನು ಸಿಡಿಲಾಘಾತದಿಂದ ಮೃತಪಟ್ಟವರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂತಾಪ ಸೂಚಿಸಿದ್ದು, ಮೃತರ ಸಂಬಂಧಿಕರಿಗೆ 4 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಂತೆಯೇ ವಿಪತ್ತು ನಿರ್ವಹಣಾ ಇಲಾಖೆಯ ಸಲಹೆಗಳನ್ನು ಜನರು ಪಾಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಫೆಬ್ರವರಿಯಲ್ಲಿ ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಪ್ರಸ್ತುತಪಡಿಸಲಾದ ಇತ್ತೀಚಿನ ಬಿಹಾರ ಆರ್ಥಿಕ ಸಮೀಕ್ಷೆ (2023-24), 2022 ರಲ್ಲಿ ರಾಜ್ಯವು 400 ಸಿಡಿಲು ಸಂಬಂಧಿತ ಸಾವುಗಳನ್ನು ಕಂಡಿದೆ ಎಂದು ಹೇಳಿದೆ. ಗಯಾ (46), ಭೋಜ್‌ಪುರ (23), ನಾವಡಾ (21), ಬಂಕಾ (21), ಔರಂಗಾಬಾದ್ (20) ಮತ್ತು ನಳಂದಾ ಮತ್ತು ಕೈಮೂರ್‌ಗಳಲ್ಲಿ ತಲಾ 18 ಮಂದಿ ಸಾವನ್ನಪ್ಪಿದ್ದಾರೆ.

ಬಿಹಾರವು 2022-23ರಲ್ಲಿ ವಿಪತ್ತು ನಿರ್ವಹಣೆಗಾಗಿ 430.92 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ಸಮೀಕ್ಷೆಯು ಗಮನಿಸಿದೆ, ಅದರಲ್ಲಿ ದೊಡ್ಡ ಭಾಗ ಅಂದರೆ - 285.22 ಕೋಟಿ ರೂ.ಗಳನ್ನು ಸಿಡಿಲಾಘಾತ ಮತ್ತು ಪ್ರವಾಹದಂತಹ ಸ್ಥಳೀಯ ವಿಪತ್ತುಗಳಿಗೆ ಮೀಸಲಿಡಲಾಗಿದೆ.

ತಿಂಗಳಲ್ಲಿ 2ನೇ ಪ್ರಕರಣ

ಇನ್ನು ಸಿಡಿಲಾಘಾತ ಪ್ರಕರಣ 2ನೇಯದ್ದಾಗಿದ್ದು, ಈ ಹಿಂದೆ ಜುಲೈ 12ರಂದು ಸಂಭಲಿಸಿದ್ದ ಸಿಡಿಲಾಘಾತ ಪ್ರಕರಣದಲ್ಲಿ ಕನಿಷ್ಟ 21 ಮಂದಿ ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

2nd Test, Day 2: 2ನೇ ದಿನದಾಟ ಅಂತ್ಯ, ವಿಂಡೀಸ್ 140/4, 378 ರನ್ ಹಿನ್ನಡೆ, ಜಡೇಜಾಗೆ 3 ವಿಕೆಟ್

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT