ಶಿಮ್ಲಾ ಜಿಲ್ಲೆಯ ರಾಮ್‌ಪುರ ಪ್ರದೇಶದ ಸಮೇಜ್ ಖಾಡ್‌ನಲ್ಲಿ ಮೇಘಸ್ಫೋಟದ ನಂತರ ಹಲವಾರು ಜನರು ಕಾಣೆಯಾಗಿದ್ದಾರೆ  
ದೇಶ

ಹಿಮಾಚಲ ಪ್ರದೇಶ: ಶಿಮ್ಲಾ ಮೇಘಸ್ಫೋಟಕ್ಕೆ ಇಬ್ಬರು ಸಾವು, 50ಕ್ಕೂ ಹೆಚ್ಚು ಮಂದಿ ನಾಪತ್ತೆ, ಸಂಪರ್ಕ ಕಳೆದುಕೊಂಡ ಮನಾಲಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ಪೊಲೀಸರು ಮತ್ತು ಗೃಹರಕ್ಷಕ ದಳದ ತಂಡಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.

ಶಿಮ್ಲಾ: ಹಿಮಾಚಲ ಪ್ರದೇಶದ ಕುಲು, ಶಿಮ್ಲಾ ಮತ್ತು ಮಂಡಿ ಜಿಲ್ಲೆಗಳಲ್ಲಿ ಗುರುವಾರ ಸಂಭವಿಸಿದ ಬಹು ಮೇಘಸ್ಫೋಟದಲ್ಲಿ ಸುಮಾರು 50 ಮಂದಿ ನಾಪತ್ತೆಯಾಗಿದ್ದಾರೆ ಮತ್ತು ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದುರಂತದಲ್ಲಿ ಮನಾಲಿ ಪ್ರದೇಶ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಳಿಸಿದೆ, ರಾಜ್ಯ ಸರ್ಕಾರವು ಸೇನೆ ಮತ್ತು ವಾಯುಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿರಲು ವಿನಂತಿ ಮಾಡಿಕೊಂಡಿದೆ.

ಶಿಮ್ಲಾ ಜಿಲ್ಲೆಯ ರಾಮ್‌ಪುರದ ಜಕ್ರಿಯ ಸಮೇಜ್ ಖುದ್‌ನಲ್ಲಿ ಮೇಘಸ್ಫೋಟದ ನಂತರ 32 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ಮಂಡಿ ಜಿಲ್ಲೆಯ ಟಿಕ್ಕನ್ ತಾಲುಕೋಟ್ ಗ್ರಾಮದ ಬಳಿ ರಾಜ್‌ಬಾನ್ ಹಳ್ಳಿಯಲ್ಲಿ ಮೇಘಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ, ಇದರಲ್ಲಿ ಒಬ್ಬರು ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಒಂಬತ್ತು ಮಂದಿ ಕಾಣೆಯಾಗಿದ್ದಾರೆ. ಎಲ್ಲರೂ ಅವಶೇಷಗಳಡಿಯಲ್ಲಿ ಹೂತುಹೋಗಿದ್ದು, ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಕುಲುವಿನ ಪರಾವತಿ ಕಣಿವೆಯಲ್ಲಿ ಮತ್ತೊಂದು ಮೋಡದ ಸ್ಫೋಟ ಸಂಭವಿಸಿದರೆ, ಮಲಾನಾ 2 ಪವರ್ ಪ್ರಾಜೆಕ್ಟ್ ಹೆಚ್ಚು ಹಾನಿಗೊಳಗಾಗಿದೆ. ನೀರಿನ ಹರಿವಿನ ಮಟ್ಟ ಏರಿಕೆಯಾಗಿದ್ದು, ಜನರು ನದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ದೂರವಿರಲು ಸೂಚಿಸಲಾಗಿದೆ. ಕುಲು ಜಿಲ್ಲೆಯ ನಿರ್ಮಂದ್‌ನಲ್ಲಿ ಸಂಭವಿಸಿದ ಮತ್ತೊಂದು ಘಟನೆಯಲ್ಲಿ ಏಳು ಮಂದಿ ನಾಪತ್ತೆಯಾಗಿದ್ದಾರೆ, ಸಂಪರ್ಕ ವ್ಯತ್ಯಯವಾಗಿದೆ, ಹಲವಾರು ಮನೆಗಳು ಕೊಚ್ಚಿಕೊಂಡು ಹೋಗಿದ್ದು ನಷ್ಟವನ್ನು ಅಂದಾಜಿಸಲಾಗುತ್ತಿದೆ.

ಎಲ್ಲ ಕಡೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿ ವಿವಿಧೆಡೆ ಕೊಚ್ಚಿ ಹೋಗಿದೆ. ಹಠಾತ್ ಪ್ರವಾಹದ ನಂತರ ಕುಲು ಜಿಲ್ಲೆಯಲ್ಲಿ ಹೆದ್ದಾರಿಯ ಒಂದು ಭಾಗವನ್ನು ಸಂಚಾರಕ್ಕೆ ಮುಚ್ಚಲಾಯಿತು.

ಮಣಿಕರಣ್‌ನ ಶಾಟ್ ಸಬ್ಜಿ ಮಂಡಿಯಿಂದ ಇಂದು ಬೆಳಗ್ಗೆ ಕುಲುವಿನಲ್ಲಿ ಪಾರ್ವತಿ ನದಿಯ ರಭಸಕ್ಕೆ ಕಟ್ಟಡವೊಂದು ಕುಸಿದು ಕೊಚ್ಚಿಹೋಗುವ ಭಯಾನಕ ದೃಶ್ಯಗಳು ಬರುತ್ತಿವೆ. ಅಷ್ಟೇ ಅಲ್ಲ ನಿನ್ನೆ ರಾತ್ರಿ ಕುಲು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ನಂತರ ಬಿಯಾಸ್ ನದಿಯ ಹರಿವು ಹೆಚ್ಚಾಗುತ್ತಿದ್ದಂತೆ ಭಯಾನಕ ದೃಶ್ಯಗಳು ಬರುತ್ತಿವೆ.

ಮಂಡಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ ಮದನ್ ಕುಮಾರ್ ಮಾಹಿತಿಯ ಪ್ರಕಾರ, ಸದ್ಯಕ್ಕೆ ಒಂದು ಮೃತದೇಹ ಪತ್ತೆಯಾಗಿದೆ, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಮತ್ತು ಸುಮಾರು ಒಂಬತ್ತು ಜನರು ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಹಿಮಾಚಲ ಪ್ರದೇಶ ಪೊಲೀಸ್ ಮತ್ತು ತಹಸೀಲ್ದಾರ್ ಪಾಧರ್ ಸೇರಿದಂತೆ ತುರ್ತು ಸ್ಪಂದನ ತಂಡಗಳು ಸ್ಥಳದಲ್ಲಿವೆ. ಜೊತೆಗೆ ರಕ್ಷಣಾ ತಂಡಕ್ಕೆ ಸಹಾಯ ಮಾಡಲು ವೈದ್ಯಕೀಯ ತಂಡ ಧಾವಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ, ವಿಪತ್ತಿನಿಂದ ಹಾನಿಗೊಳಗಾದವರನ್ನು ಪತ್ತೆಹಚ್ಚಲು ಮತ್ತು ಸಹಾಯ ಮಾಡಲು ತಂಡಗಳು ನಿರಂತರವಾಗಿ ಶ್ರಮಿಸುತ್ತಿವೆ.

ಶಿಮ್ಲಾದ ಡೆಪ್ಯುಟಿ ಕಮಿಷನರ್ ಅನುಪಮ್ ಕಶ್ಯಪ್, ರಸ್ತೆಗಳು ಕೊಚ್ಚಿಹೋಗಿವೆ ಮತ್ತು ಪ್ರದೇಶದ ಜಲವಿದ್ಯುತ್ ಯೋಜನೆಗೆ ಹಾನಿಯಾಗಿದೆ. ನಾಪತ್ತೆಯಾದವರ ಪತ್ತೆಗೆ ಡ್ರೋನ್‌ಗಳನ್ನೂ ಬಳಸಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ಪೊಲೀಸರು ಮತ್ತು ಗೃಹರಕ್ಷಕ ದಳದ ತಂಡಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ ಎಂದಿದ್ದಾರೆ.

ಕಿನ್ನೌರ್ ಲಾಹೌಲ್ ಮತ್ತು ಸಿಪಿಟಿ ಹೊರತುಪಡಿಸಿ ಹಿಮಾಚಲ ಪ್ರದೇಶದ ಎಲ್ಲಾ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಿಂದ ಭಾರೀ ಮಳೆಗಾಗಿ ಆರೆಂಜ್ ಅಲರ್ಟ್ ನ್ನು ಹವಾಮಾನ ಕಚೇರಿ ನೀಡಿದೆ. ಕುಲು, ಸೋಲನ್, ಸಿರ್ಮೌರ್, ಶಿಮ್ಲಾ ಮತ್ತು ಕಿನ್ನೌರ್ ಜಿಲ್ಲೆಗಳ ದುರ್ಬಲ ಪ್ರದೇಶಗಳಲ್ಲಿ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳು ಮತ್ತು ತೋಟಗಳು ಮತ್ತು ನಿಂತಿರುವ ಬೆಳೆಗಳು, ದುರ್ಬಲ ರಚನೆಗಳಿಗೆ ಹಾನಿಯಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT