ಮುಂಬೈ: ಮಹಾರಾಷ್ಟ್ರದಲ್ಲಿ 19 ವರ್ಷದ ಯುವಕನನ್ನು ಅಪಹರಣ ಮಾಡಿ ದರೋಡೆ ಮಾಡಿರುವ ಘಟನೆ ಥಾಣೆ ನಗರದಲ್ಲಿ ವರದಿಯಾಗಿದೆ.
6 ಮಂದಿಯ ತಂಡ ಈ ಕುಕೃತ್ಯ ಎಸಗಿದ್ದು, ಅಪಹರಣಕ್ಕೆ ಒಳಗಾದ ಯುವಕನಿಂದ ಹಣ ದರೋಡೆ ಮಾಡಿದ್ದಾರೆ. ದರೋಡೆಗೂ ಮುನ್ನ ಆತನಿಗೆ ಸ್ಕ್ರೀನ್ ಶಾಟ್ ಒಂದನ್ನು ತೋರಿಸಿ ಅದನ್ನು ಕ್ರಿಪ್ಟೋ ಕರೆನ್ಸಿಯ ವರ್ಗಾವಣೆ ಎಂದು ಹೇಳಿದ್ದಾರೆ.
ಹಣ ನೀಡಲು ನಿರಾಕರಿಸಿದ್ದ ಯುವಕನನ್ನು ವಾಹನದೊಳಗೆ ಎಳೆದೊಯ್ದಿದ್ದು, ಮುಂಬ್ರಾ ಬೈಪಾಸ್ ಮೇಲ್ಸೇತುವೆ ಬಳಿ ಕರೆದೊಯ್ದು, 3000 ರೂಪಾಯಿಗಳನ್ನು ಕಿತ್ತುಕೊಂಡಿದ್ದಾರೆ. ಈ ಘಟನೆ ಸಂಬಂಧ FIR ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಾದ ಬಾಬು ಕೈಫ್, ಅರ್ಷದ್ ಆದಿಲ್ ಅನ್ಸಾರಿ, ಅಮೀರ್ ಖಾನ್, ಅಕಿಬ್ ಆರಿಫ್ ಖಾನ್, ಮೊಹಮ್ಮದ್ ಆದಿಲ್ ಅನ್ಸಾರಿ ಮತ್ತು ಫರ್ಹಾನ್ ಶೇಖ್ ಅವರು 19 ವರ್ಷದ ಯುವಕನನ್ನು ಹೋಗಲು ಬಿಡುವ ಮೊದಲು ಕ್ಯಾಮೆರಾದಲ್ಲಿ ಹೇಳುವಂತೆ ಒತ್ತಾಯಿಸಿದರು.
ಅರ್ಷದ್ ಮತ್ತು ಅಕಿಬ್ ಅವರನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ನೌಪಾದ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.