ಮನೀಶ್ ಸಿಸೋಡಿಯಾ 
ದೇಶ

Delhi Excise Policy case: ಕೊನೆಗೂ ಮನಿಶ್ ಸಿಸೋಡಿಯಾಗೆ ಜಾಮೀನು; 17 ತಿಂಗಳ ಸೆರೆವಾಸ ಅಂತ್ಯ, ಕೆಳ ಹಂತದ ಕೋರ್ಟ್ ಗಳಿಗೆ 'ಸುಪ್ರೀಂ' ತರಾಟೆ

ಅಬಕಾರಿ ನೀತಿ ಹಗರಣದ ವಿಚಾರಣೆಯಾಗಿ ಕೆಳಹಂತದ ಕೋರ್ಟ್ ಗಳನ್ನು ಇದೇ ವೇಳೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ವಿಚಾರಣೆ ನಿಧಾನಗತಿಯನ್ನು ತೀವ್ರವಾಗಿ ಟೀಕಿಸಿದೆ.

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ (Excise Policy case)ದಲ್ಲಿ ಜೈಲುಪಾಲಾಗಿದ್ದ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಕೊನೆಗೂ ಜಾಮೀನು ಮಂಜೂರು ಮಾಡಿದ್ದು ಆ ಮೂಲಕ ಸಿಸೋಡಿಯಾರ 17 ತಿಂಗಳ ಸೆರೆವಾಸ ಕೊನೆಗೂ ಅಂತ್ಯಕಂಡಿದೆ.

ಹೌದು.. ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಕೊನೆಗೂ ಜಾಮೀನು ಮಂಜೂರು ಮಾಡಿದ್ದು, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅವರಿಗೆ ಸರ್ವೋಚ್ಚ ನ್ಯಾಯಾಲಯ ಜಾಮೀನು ನೀಡಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟ 18 ತಿಂಗಳ ನಂತರ ಅವರಿಗೆ ಜಾಮೀನು ಸಿಕ್ಕಿದೆ.

ಕೆಳ ಹಂತದ ಕೋರ್ಟ್ ಗಳಿಗೆ Supreme Court ತರಾಟೆ

ಇನ್ನು ಅಬಕಾರಿ ನೀತಿ ಹಗರಣದ ವಿಚಾರಣೆಯಾಗಿ ಕೆಳಹಂತದ ಕೋರ್ಟ್ ಗಳನ್ನು ಇದೇ ವೇಳೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ವಿಚಾರಣೆ ನಿಧಾನಗತಿಯನ್ನು ತೀವ್ರವಾಗಿ ಟೀಕಿಸಿದೆ. ತ್ವರಿತ ವಿಚಾರಣೆ ಮತ್ತು ತ್ವರಿತ ನ್ಯಾಯ ದೇಶದ ಎಲ್ಲ ನಾಗರಿಕನ ಹಕ್ಕು. ಯಾವುದೇ ಕಾರಣಕ್ಕೂ ಅದನ್ನು ನಿರಾಕರಿಸುವಂತಿಲ್ಲ ಮತ್ತು ವಿಳಂಬ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಮುಖ ಉಲ್ಲೇಖಗಳು:

"ಮೇಲ್ಮನವಿದಾರನನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಮ್ಮೆಟ್ಟಿಸುವುದು ನ್ಯಾಯದ ಅಪಹಾಸ್ಯ."

"ತ್ವರಿತ ವಿಚಾರಣೆಯ ಹಕ್ಕು ಪವಿತ್ರ ಹಕ್ಕಾಗಿದೆ... ಅಪರಾಧವು ಗಂಭೀರವಾಗಿದೆ ಎಂದು ಹೇಳುವ ಮೂಲಕ ಜಾಮೀನು ವಿರೋಧಿಸಲು ಸಾಧ್ಯವಿಲ್ಲ"

''ಜಾಮೀನು ವಿಚಾರದಲ್ಲಿ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯ ಸೇಫ್ ಗೇಮ್ ಆಟವಾಡುತ್ತಿದೆ...''

"ವಿಚಾರಣೆಯನ್ನು ಪೂರ್ಣಗೊಳಿಸುವ ಉದ್ದೇಶದಿಂದ ಅವರನ್ನು ಕಂಬಿಗಳ ಹಿಂದೆ ಇಡುವುದು ಆರ್ಟಿಕಲ್ 21 ರ ಉಲ್ಲಂಘನೆಯಾಗಿದೆ."

"ದೀರ್ಘ ಸೆರೆವಾಸದ ಅವಧಿಯಲ್ಲಿ ಜಾಮೀನು ನೀಡಬಹುದು ಎಂದು ಹೇಳುವ ತೀರ್ಪುಗಳನ್ನು ನಾವು ಗಮನಿಸಿದ್ದೇವೆ."

"ಅಪೀಲುದಾರನನ್ನು ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ಕಳುಹಿಸುವುದು ಅವನೊಂದಿಗೆ ಹಾವು ಮತ್ತು ಏಣಿಗಳ ಆಟವನ್ನು ಆಡಿದಂತೆ ಆಗುತ್ತದೆ'' ಎಂದು ನ್ಯಾಯಾಲಯ ಕಿಡಿಕಾರಿದೆ.

'ಜಾಮೀನು ನಿಯಮ ಮತ್ತು ಜೈಲು ವಿನಾಯಿತಿ'

ಇದೇ ವೇಳೆ ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಕುರಿತು ಮಾತನಾಡಿದ ಎಎಪಿ ನಾಯಕನ ಪರ ವಕೀಲ ರಿಷಿಕೇಶ್ ಕುಮಾರ್, "ಸಿಬಿಐ ಮತ್ತು ಇಡಿ ಪ್ರಕರಣಗಳಲ್ಲಿ ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಅವರು ಕಳೆದ 17 ತಿಂಗಳುಗಳಿಂದ ಜೈಲಿನಲ್ಲಿದ್ದರು. ಸುಪ್ರೀಂ ಕೋರ್ಟ್ ಕೂಡ ಜಾಮೀನು ನೀಡಿದೆ. ಮನೀಷ್ ಸಿಸೋಡಿಯಾ ಅವರ ಕಡೆಯಿಂದ, ವಿಚಾರಣೆಯಲ್ಲಿ ಯಾವುದೇ ವಿಳಂಬವಾಗಿಲ್ಲ ಮತ್ತು ಜಾಮೀನು ಕೋರಿ ಎಲ್ಲಾ ಪ್ರಕರಣಗಳು ಸುಪ್ರೀಂ ಕೋರ್ಟ್‌ಗೆ ತಲುಪದಂತೆ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು 'ಜಾಮೀನು ನಿಯಮ ಮತ್ತು ಜೈಲು ವಿನಾಯಿತಿ'... ಆದೇಶವು ಇದೀಗ ಬಂದಿದೆ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ನಾವು ಷರತ್ತುಗಳನ್ನು ಪೂರೈಸಿದ ತಕ್ಷಣ, ಮನೀಶ್ ಸಿಸೋಡಿಯಾ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT