ಮುಂಬೈ: ಬಹುನಿರೀಕ್ಷಿತ ' Pushpa 2: The Rule' ದೇಶಾದ್ಯಂತ ಭರ್ಜರಿ ಓಪನಿಂಗ್ ಪಡೆದಿರುವಂತೆಯೇ ಥಿಯೇಟರ್ ವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ಪ್ರೇ' ಸಿಂಪಡಿಸಿ ಪ್ರದರ್ಶನಕ್ಕೆ ಅಡ್ಡಿಯಾದ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.
ಬಾಂದ್ರಾದ ಗೆಲಾಕ್ಸಿ ಥಿಯೇಟರ್ ನಲ್ಲಿ ನಡೆದಿರುವ ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇಂಟರ್ವಲ್ ಮುಗಿಯುತ್ತಿದ್ದಂತೆಯೇ ಅಪರಿಚಿತ ವ್ಯಕ್ತಿಯೊಬ್ಬ ಸಿಂಪಡಿಸಿದ ಸ್ಪ್ರೇನಿಂದ ವಾಂತಿ, ಗಂಟಲು ಕೆರೆತ, ವಾಂತಿ ಮತ್ತಿತರ ಕಿರಿಕಿರಿ ಉಂಟಾಗಿದೆ. ಬಳಿಕ ಸುಮಾರು 15-20 ನಿಮಿಷಗಳ ಕಾಲ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು.
ಇಂಟರ್ವಲ್ ಮುಗಿಯುದ ನಂತರ ಥಿಯೇಟರ್ ಒಳಗೆ ಹೋದಾಗ, ಅಪರಿಚಿತ ವ್ಯಕ್ತಿಯೊಬ್ಬ 'ಸ್ಪ್ರೇ' ಸಿಂಪಡಿಸಿರುವುದು ಕಂಡುಬಂದಿತ್ತು. ನಂತರ ಸುಮಾರು 10-15 ನಿಮಿಷಗಳ ಕಾಲ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. ಪೊಲೀಸರು ಬಂದು ಎಲ್ಲಾರನ್ನು ಪರಿಶೀಲಿಸಿದರು ಎಂದು ಪ್ರೇಕ್ಷಕ ದೀನ್ ದಯಾಳ್ ತಿಳಿಸಿದರು.
ಚಿತ್ರ ಪ್ರದರ್ಶನ ಮುಗಿದ ನಂತರ ಥಿಯೇಟರ್ ಹೊರಗೆ ಬಂದು ಮಾತನಾಡಿದ ರಂಜಾನ್, ವಿರಾಮದ ನಂತರ ಕೆಮ್ಮ ಆರಂಭವಾಯಿತು. ಬಾತ್ ರೂಂ ಗೆ ಹೋಗಿ ವಾಂತಿ ಮಾಡಿದ್ದೇವು. ಸುಮಾರು 10-15 ನಿಮಿಷ ಸ್ಪ್ರೇ ವಾಸನೆ ಇತ್ತು. ಬಾಗಿಲು ತೆಗೆದ ನಂತರ ವಾಸನೆ ಹೋಯಿತು. ನಂತರ ಚಿತ್ರ ಪ್ರದರ್ಶನ ಪುನರಾರಂಭವಾಯಿತು ಎಂದು ಹೇಳಿದರು.
ಡಿಸೆಂಬರ್ 4 ರಂದು ಹೈದರಾಬಾದ್ ನ ಸಂಧ್ಯಾ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋ ವೇಳೆ ವೇಳೆಯಲ್ಲಿ ಭಾರಿ ಜನಸಂದಣಿಯಿಂದ ಉಂಟಾದ ನೂಕು ನುಗ್ಗಲಿನಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಅವರ ಮಗು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮೃತ ಮಹಿಳೆ ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.