ಕೋಲ್ಕತಾ: ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ಅಸಭ್ಯ ವರ್ತನೆ ವ್ಯಾಪಕವಾಗಿದ್ದು ಈ ಬಾರಿ ಯುವಜೋಡಿಯೊಂದು ಮೆಟ್ರೋ ನಿಲ್ದಾಣದ ಆವರಣದಲ್ಲೇ ಲಿಪ್ ಲಾಕ್ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಕೋಲ್ಕತಾದ ಕಾಳಿಘಾಟ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ವರದಿಯಾಗಿದ್ದು, ಮೆಟ್ರೋ ನಿಲ್ದಾಣದಲ್ಲಿ ಪ್ರೇಮಿಗಳಿಬ್ಬರು ಲೋಕದ ಪರಿವೇ ಇಲ್ಲದೆ, ಎಲ್ಲರೆದುರಲ್ಲೇ ಪರಸ್ಪರ ಬಿಗಿಯಾಗಿ ತಬ್ಬಿಕೊಂಡು ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೆಲ ಪ್ರೇಮಿಗಳು, ರೈಲು, ಮೆಟ್ರೋ, ಬಸ್, ಪಾರ್ಕ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೂ ಕ್ಯಾರೇ ಅನ್ನದೇ ಅಸಭ್ಯ ವರ್ತನೆಯನ್ನು ತೋರುತ್ತಿರುತ್ತಾರೆ. ಇಂತಹ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿವೆ.
ಇದೀಗ ಮತ್ತೊಂದು ಇಂತಹದ್ದೇ ಘಟನೆ ಕೋಲ್ಕತಾದ ಕಾಳಿಘಾಟ್ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಪ್ರೇಮಿಗಳಿಬ್ಬರು ಲೋಕದ ಪರಿವೇ ಇಲ್ಲದೆ ಪರಸ್ಪರ ತಬ್ಬಿಕೊಂಡು ಲಿಪ್ ಲಾಕ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇವರ ರೊಮ್ಯಾನ್ಸ್ ಕಂಡು ಅಲ್ಲಿದ್ದವರು ಫುಲ್ ಶಾಕ್ ಆಗಿದ್ದಾರೆ. ಪ್ರೇಮಿಗಳಿಬ್ಬರ ಈ ಅತಿಯಾದ ವರ್ತನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಶುಭಾಂಗಿ ಪಂಡಿತ್ (Babymishra_) ಪಂಡಿತ್ ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೆಟ್ರೋ ಸ್ಟೇಷನ್‌ನಲ್ಲಿ ಇತರೆ ಪ್ರಯಾಣಿಕರ ಎದುರಲ್ಲೇ ಪ್ರೇಮಿಗಳಿಬ್ಬರು ಪರಸ್ಪರ ತಬ್ಬಿಕೊಂಡು ಲಿಪ್ ಲಾಕ್ ಮಾಡುತ್ತಾ ರೊಮ್ಯಾನ್ಸ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.