ಸುದ್ದಿಗೋಷ್ಠಿಯಲ್ಲಿ ಮಹಾಯುತಿ ನಾಯಕರು online desk
ದೇಶ

'ಮಹಾ ಗಜಪ್ರಸವ': ಕೊನೆಗೂ ಫಡ್ನವಿಸ್ ಸಂಪುಟ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವುದು?; ಇಲ್ಲಿದೆ ವಿವರ

ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನ ಮಾರ್ಚ್ 3 ರಂದು ಮುಂಬೈನಲ್ಲಿ ಆರಂಭವಾಗಲಿದೆ.

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಹಾಗೂ ಸಂಪುಟ ಅಸ್ತಿತ್ವಕ್ಕೆ ಬಂದ ಹಲವು ದಿನಗಳ ಬಳಿಕ ಕೊನೆಗೂ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಮಹತ್ವದ ಗೃಹ ಖಾತೆಯನ್ನು ಸಿಎಂ ದೇವೇಂದ್ರ ಫಡ್ನವಿಸ್ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಡಿಸಿಎಂ ಹಾಗೂ ಶಿವಸೇನೆ ನಾಯಕ ಏಕನಾಥ್ ಶಿಂಧೆ ನಗರಾಭಿವೃದ್ಧಿ, ವಸತಿ ಮತ್ತು ಸಾರ್ವಜನಿಕ ಕಾರ್ಯಗಳ ಸಚಿವಾಲಯ ಪಡೆದಿದ್ದಾರೆ.

ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ರಾಜ್ಯ ಅಬಕಾರಿ ಜೊತೆಗೆ ಹಣಕಾಸು ಮತ್ತು ಯೋಜನೆ ಖಾತೆಯನ್ನು ನೀಡಲಾಗಿದೆ. ಮಹಾಯುತಿ ಸರ್ಕಾರ ಭಾನುವಾರ ತನ್ನ ಸಂಪುಟ ವಿಸ್ತರಣೆಯಿಂದ ಹಲವಾರು ನಾಯಕರನ್ನು ಕೈಬಿಟ್ಟ ನಂತರ ಈ ಬೆಳವಣಿಗೆಯಾಗಿದೆ.

ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನ ಮಾರ್ಚ್ 3 ರಂದು ಮುಂಬೈನಲ್ಲಿ ಆರಂಭವಾಗಲಿದೆ.

ಪ್ರಮುಖ ಖಾತೆ ಹಂಚಿಕೆ ವಿವರ ಹೀಗಿದೆ:

ಉದಯ್ ಸಮಂತ್: ಕೈಗಾರಿಕೆ, ಮರಾಠಿ ಭಾಷೆ

ಅಶೋಕ್ ಯುಕೆ: ಬುಡಕಟ್ಟು ಅಭಿವೃದ್ಧಿ,

ಸಂಜಯ್ ಪ್ರಮೀಳಾ: ಮಣ್ಣು ಮತ್ತು ಜಲ ಸಂರಕ್ಷಣೆ

ಮಂಗಲ್ ಪ್ರಭಾತ್: ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಉದ್ಯಮಶೀಲತೆ ಮತ್ತು ನಾವೀನ್ಯತೆ

ಜಯಕುಮಾರ್ ರಾವಲ್: ಮಾರ್ಕೆಟಿಂಗ್, ಪ್ರೋಟೋಕಾಲ್

ಪಂಕಜಾ ಮುಂಡೆ: ಪರಿಸರ ಮತ್ತು ಹವಾಮಾನ ಬದಲಾವಣೆ, ಪಶುಸಂಗೋಪನೆ

ಅತುಲ್ ಸೇವ್: OBC ಕಲ್ಯಾಣ, ಡೈರಿ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ

ಶಂಭುರಾಜ್ ದೇಸಾಯಿ: ಪ್ರವಾಸೋದ್ಯಮ, ಗಣಿಗಾರಿಕೆ, ಮಾಜಿ ಸೇವಾ ಪುರುಷರ ಕಲ್ಯಾಣ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT