ಅಖಿಲೇಶ್ ಯಾದವ್ 
ದೇಶ

EVM ನಂಬಿಕೆಗೆ ಅರ್ಹವಾಗಿಲ್ಲ: ಬ್ಯಾಲೆಟ್ ಪೇಪರ್ ಮತದಾನದ ಪರ ಧ್ವನಿ ಎತ್ತಿದ ಅಖಿಲೇಶ್!

ಜರ್ಮನಿಯಂತಹ ದೇಶ ಕೂಡ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸುತ್ತದೆ. ಆದರೆ ಭಾರತದಲ್ಲಿ, ಪಟ್ಟಭದ್ರ ಹಿತಾಸಕ್ತಿಗಳನ್ನು ಪೂರೈಸಲು ಇವಿಎಂಗಳ ಮೂಲಕ ಚುನಾವಣೆಗಳನ್ನು ನಡೆಸಲಾಗುತ್ತಿದೆ.

ಲಖನೌ: ವಿದ್ಯುನ್ಮಾನ ಮತಯಂತ್ರಗಳು (EVM)ನಂಬಿಕೆ ಅರ್ಹವಾಗಿಲ್ಲ ಎಂದು ಹೇಳಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಮತಪತ್ರಗಳ ಮೂಲಕ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಜರ್ಮನಿಯಲ್ಲಿರುವ ಭಾರತೀಯ ಮೂಲದ ಸಂಸತ್ ಸದಸ್ಯ ರಾಹುಲ್ ಕುಮಾರ್ ಕಾಂಬೋಜ್ ಅವರೊಂದಿಗೆ ಎಸ್‌ಪಿ ಕೇಂದ್ರ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಅಖಿಲೇಶ್ ಯಾದವ್, ಜರ್ಮನಿಯಂತಹ ದೇಶ ಕೂಡ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸುತ್ತದೆ. ಆದರೆ ಭಾರತದಲ್ಲಿ, ಪಟ್ಟಭದ್ರ ಹಿತಾಸಕ್ತಿಗಳನ್ನು ಪೂರೈಸಲು ಇವಿಎಂಗಳ ಮೂಲಕ ಚುನಾವಣೆಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಇವಿಎಂಗಳನ್ನು ಯಾರೂ ನಂಬುವುದಿಲ್ಲ, ಚುನಾವಣೆಯಲ್ಲಿ ಗೆದ್ದವರ ಮುಖವೂ ಸಹ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲದ ಕಾರಣ ನಿರಾಶೆಗೊಂಡಂತಿರುತ್ತದೆ ಎಂದು ಹೇಳುವ ಮೂಲಕ ಆತ್ಮವಿಶ್ವಾಸ ತುಂಬುವ ಚುನಾವಣೆಯ ಅಗತ್ಯವನ್ನು ಒತ್ತಿ ಹೇಳಿದರು.

ಜರ್ಮನಿಯ ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯ ಪ್ರಯೋಜನ ಕುರಿತು ಮಾತನಾಡಿದ ಕಾಂಬೋಜ್, ಜರ್ಮನಿಯಲ್ಲಿ ಈಗಲೂ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಲಾಗುತ್ತದೆ. ಯಾವುದೇ ವ್ಯತ್ಯಾಸಗಳನ್ನು ಮರುಎಣಿಕೆಯ ಮೂಲಕ ಪರಿಹರಿಸಬಹುದಾಗಿದ್ದು, ಇದೊಂದು ಪ್ರಮುಖ ವ್ಯವಸ್ಥೆಯಾಗಿದೆ ಎಂದರು.

ಲಖನೌ ಭೇಟಿ ಮತ್ತು ಯಾದವ್ ಅವರೊಂದಿಗಿನ ದೀರ್ಘಕಾಲದ ಸಂಬಂಧ ಕುರಿತು ಮಾತನಾಡಿದ ಕಾಂಬೋಜ್, ಭಾರತೀಯ ಮೂಲದ ವ್ಯಕ್ತಿಗಳು ಮತ್ತು ಜರ್ಮನಿಯ ನಡುವೆ ಸಹಯೋಗವನ್ನು ಬೆಳೆಸುವಲ್ಲಿ ನನ್ನ ಪ್ರಯತ್ನಗಳು ಕೇಂದ್ರೀಕೃತವಾಗಿವೆ. ಇದರಿಂದಾಗಿ ಎರಡೂ ದೇಶಗಳ ಗುಣಗಳು ಒಟ್ಟಿಗೆ ಬರುತ್ತವೆ. ಸಾಂಸ್ಕೃತಿಕ ವಿನಿಮಯವನ್ನು ಸುಗಮಗೊಳಿಸುವ ಗುರಿ ಹೊಂದಿದ್ದೇವೆ. ಮತ್ತು ಜರ್ಮನಿಯಲ್ಲಿ ಮುಂಬರುವ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಲು ಎಲ್ಲರನ್ನು ಆಹ್ವಾನಿಸುತ್ತೇನೆ, ವೀಸಾ ಸಮಸ್ಯೆಗಳು ಇನ್ನು ಮುಂದೆ ಅಡ್ಡಿಯಾಗುವುದಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT