ರಾಹುಲ್ ಗಾಂಧಿ- ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್  Rahul Gandhi- Former PM Manmohan Singh
ದೇಶ

ಮನಮೋಹನ್ ಸಿಂಗ್ ಸಾವಿನ ಬೆನ್ನಲ್ಲೇ ರಾಹುಲ್ ಗಾಂಧಿ ವಿಯೆಟ್ನಾಂ ಪ್ರವಾಸ: ನಿಮಗೇನು ಸಮಸ್ಯೆ?- BJP ಟೀಕೆಗೆ ಕಾಂಗ್ರೆಸ್ ಪ್ರಶ್ನೆ!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯ ವ್ಯವಸ್ಥೆಯನ್ನು ನಿರ್ವಹಿಸುವುದರಲ್ಲಿನ ಲೋಪಗಳನ್ನು ಮುಚ್ಚಿ ಹಾಕಿಕೊಳ್ಳುವುದಕ್ಕಾಗಿ ರಾಹುಲ್ ಗಾಂಧಿ ಪ್ರವಾಸದ ಬಗ್ಗೆ ಟೀಕಾಪ್ರಹಾರ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸಾವಿನ ಹಿನ್ನೆಲೆಯಲ್ಲಿ ದೇಶಾದ್ಯಂತ 7 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಮನರಂಜನಾ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿಯೆಟ್ನಾಂ ಪ್ರವಾಸಕ್ಕೆ ಹೊರಟು ನಿಂತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಹುಲ್ ಗಾಂಧಿ ವಿಯೆಟ್ನಾಂ ಪ್ರವಾಸಕ್ಕೆ ತೆರಳುವುದನ್ನು ಬಿಜೆಪಿ ಟೀಕಿಸಿದೆ. ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯ ವ್ಯವಸ್ಥೆಯನ್ನು ನಿರ್ವಹಿಸುವುದರಲ್ಲಿನ ಲೋಪಗಳನ್ನು ಮುಚ್ಚಿ ಹಾಕಿಕೊಳ್ಳುವುದಕ್ಕಾಗಿ ರಾಹುಲ್ ಗಾಂಧಿ ಪ್ರವಾಸದ ಬಗ್ಗೆ ಟೀಕಾಪ್ರಹಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾಎಕ್ಸ್ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿಯನ್ನು ಸಂವೇದನಾಶೀಲತೆಯಿಲ್ಲದ ವ್ಯಕ್ತಿ ಎಂದು ಟೀಕಿಸಿದ್ದಾರೆ. "ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ದೇಶ ಶೋಕಿಸುತ್ತಿರುವಾಗ, ರಾಹುಲ್ ಗಾಂಧಿ ಹೊಸ ವರ್ಷವನ್ನು ಆಚರಿಸಲು ವಿಯೆಟ್ನಾಂಗೆ ಹಾರಿದ್ದಾರೆ" ಎಂದು ಮಾಳವಿಯಾ ಹೇಳಿದ್ದಾರೆ.

ಆಪರೇಷನ್ ಬ್ಲೂ ಸ್ಟಾರ್ ನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡ ಮಾಳವಿಯಾ, "ಗಾಂಧಿಗಳು ಮತ್ತು ಕಾಂಗ್ರೆಸ್ ಸಿಖ್ಖರನ್ನು ದ್ವೇಷಿಸುತ್ತವೆ. ಇಂದಿರಾ ಗಾಂಧಿಯವರು ದರ್ಬಾರ್ ಸಾಹಿಬ್ ನ್ನು ಅಪವಿತ್ರಗೊಳಿಸಿದ್ದಾರೆ ಎಂಬುದನ್ನು ಎಂದಿಗೂ ಮರೆಯಬೇಡಿ" ಎಂದು ಹೇಳಿದ್ದಾರೆ.

ಇದಕ್ಕೆ ತಕ್ಕ ಉತ್ತರ ನೀಡಿದ ಕಾಂಗ್ರೆಸ್, ಹಿರಿಯ ನಾಯಕ ಮಾಣಿಕಂ ಠಾಗೋರ್ ಬಿಜೆಪಿಯು "ದಿಕ್ಕುತಪ್ಪಿಸುವ ರಾಜಕೀಯ"ದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.

"ಸಂಘಿಗಳು ಈ 'ದಿಕ್ಕು ತಪ್ಪಿಸುವ' ರಾಜಕೀಯವನ್ನು ಯಾವಾಗ ನಿಲ್ಲಿಸುತ್ತಾರೆ? ಯಮುನಾ ದಡದಲ್ಲಿ ಡಾ ಸಾಹೇಬ್‌ಗೆ ಶವಸಂಸ್ಕಾರಕ್ಕೆ ಸ್ಥಳವನ್ನು ಮೋದಿ ನಿರಾಕರಿಸಿದ ರೀತಿ ಮತ್ತು ಅವರ ಮಂತ್ರಿಗಳು ಡಾ ಸಾಹೇಬ್ ಅವರ ಕುಟುಂಬವನ್ನು ಹೇಗೆ ಮೂಲೆಗುಂಪು ಮಾಡಿದರು" ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಟ್ಯಾಗೋರ್ ಹೇಳಿದರು.

"ರಾಹುಲ್ ಗಾಂಧಿ ಖಾಸಗಿಯಾಗಿ ಪ್ರಯಾಣಿಸಿದರೆ, ಅದು ನಿಮಗೆ ಏಕೆ ತೊಂದರೆ ಕೊಡುತ್ತದೆ?" "ಹೊಸ ವರ್ಷದಲ್ಲಿ ಆರೋಗ್ಯ ಸರಿಮಾಡಿಕೊಳ್ಳಿ" ಎಂದು ಬಿಜೆಪಿ ಬಗ್ಗೆ ಟಾಗೂರ್ ವ್ಯಂಗ್ಯವಾಡಿದ್ದಾರೆ.

ಎರಡು ಬಾರಿಯ ಪ್ರಧಾನಮಂತ್ರಿಯವರ ಅಂತ್ಯಕ್ರಿಯೆ ಮತ್ತು ಸ್ಮಾರಕ ವ್ಯವಸ್ಥೆಗಳ ಕುರಿತು ಉಭಯ ಪಕ್ಷಗಳ ನಡುವೆ ನಡೆಯುತ್ತಿರುವ ವಾಗ್ವಾದದ ಭಾಗವಾಗಿ ಈ ಆರೋಪ- ಟೀಕೆಗಳು ಹೊರಬಂದಿದೆ.

ಸಿಂಗ್ ಅವರ ಅಸ್ತಿ ವಿಸರ್ಜನೆ ಸಮಾರಂಭದಲ್ಲಿ ಗಾಂಧಿ ಕುಟುಂಬ ಏಕೆ ಹಾಜರಾಗಲಿಲ್ಲ ಎಂದು ಭಾನುವಾರ ಬಿಜೆಪಿ ಪ್ರಶ್ನಿಸಿತ್ತು, ಇದಕ್ಕೆ ಕಾಂಗ್ರೆಸ್ ಅವರು ಕುಟುಂಬದ ಖಾಸಗಿತನವನ್ನು ಗೌರವಿಸುತ್ತದೆ ಎಂದು ಉತ್ತರಿಸಿತ್ತು.

ಕಳೆದ ವಾರ, ಎರಡು ಪಕ್ಷಗಳು ಸಿಂಗ್ ಅವರ ಅಂತ್ಯಕ್ರಿಯೆ ಸ್ಥಳದ ವಿಷಯವಾಗಿ ವಾಗ್ವಾದದಲ್ಲಿ ತೊಡಗಿದ್ದವು. ಸಿಂಗ್ ಅವರ ಸ್ಮಾರಕಕ್ಕಾಗಿ ಗೊತ್ತುಪಡಿಸಿದ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಬೇಕೆಂದು ಕಾಂಗ್ರೆಸ್ ವಿನಂತಿಸಿತ್ತು, ಆದರೆ ಕೇಂದ್ರ ನಿಗಮಬೋಧ ಘಾಟ್‌ನಲ್ಲಿ ಅಂತಿಮ ವಿಧಿಗಳನ್ನು ನಡೆಸಲು ನಿರ್ಧರಿಸಿತು. ಈ ವಿಷಯದಲ್ಲಿ ಕಾಂಗ್ರೆಸ್ "ಅಗ್ಗದ ರಾಜಕೀಯ" ದಲ್ಲಿ ತೊಡಗಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಕಾಂಗ್ರೆಸ್ ಸಿಂಗ್ ಅವರಿಗೆ ಬಿಜೆಪಿಯಿಂದ "ಅಗೌರವ ಮತ್ತು ಘೋರ ಅವಮಾನ" ನಡೆದಿದೆ ಎಂದು ಪ್ರತ್ಯಾರೋಪ ಆರೋಪಿಸಿದೆ.

ಮನಮೋಹನ್ ಸಿಂಗ್ ಸ್ಮರಣಾರ್ಥ ಟ್ರಸ್ಟ್ ಸ್ಥಾಪಿಸಲಾಗುವುದು ಮತ್ತು ಸ್ಮಾರಕಕ್ಕಾಗಿ ಜಾಗವನ್ನು ನೀಡಲಾಗುವುದು ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT