ಫ್ರಾನ್ಸ್ ಗೂ ಕಾಲಿಟ್ಟ ಭಾರತದ UPI ಪಾವತಿ 
ದೇಶ

ಫ್ರಾನ್ಸ್ ಗೂ ಕಾಲಿಟ್ಟ ಭಾರತದ UPI ಪಾವತಿ: ಐಫೆಲ್ ಟವರ್ ನಲ್ಲಿ ಔಪಚಾರಿಕ ಪ್ರಾರಂಭ!

ಭಾರತದ ಯಶಸ್ವೀ ಪಾವತಿ ಮಾದರಿ ಯುಪಿಐ (Unified Payments Interface) ಇದೀಗ ಜಾಗತಿಕ ಮಟ್ಟದಲ್ಲಿ ತನ್ನ ಖ್ಯಾತಿ ಗಳಿಸುತ್ತಿದ್ದು, ಇದೀಗ ಪ್ರವಾಸಿಗರ ಸ್ವರ್ಗ ಫ್ರಾನ್ಸ್ ನಲ್ಲೂ ಕೂಡ UPI ಪಾವತಿ ಸೇವೆ ಆರಂಭಗೊಂಡಿದೆ.

ಪ್ಯಾರಿಸ್: ಭಾರತದ ಯಶಸ್ವೀ ಪಾವತಿ ಮಾದರಿ ಯುಪಿಐ (Unified Payments Interface) ಇದೀಗ ಜಾಗತಿಕ ಮಟ್ಟದಲ್ಲಿ ತನ್ನ ಖ್ಯಾತಿ ಗಳಿಸುತ್ತಿದ್ದು, ಇದೀಗ ಪ್ರವಾಸಿಗರ ಸ್ವರ್ಗ ಫ್ರಾನ್ಸ್ ನಲ್ಲೂ ಕೂಡ UPI ಪಾವತಿ ಸೇವೆ ಆರಂಭಗೊಂಡಿದೆ.

ಭಾರತವು ಶುಕ್ರವಾರ ಔಪಚಾರಿಕವಾಗಿ ಪ್ಯಾರಿಸ್ ಪ್ರವಾಸೋಧ್ಯೋಮದ ಕೇಂದ್ರ ಬಿಂದು ಐಫೆಲ್ ಟವರ್ ನಲ್ಲಿ ತನ್ನ ಯುಪಿಐ ಸೇವೆಯನ್ನು ಆರಂಭಿಸಿದೆ. ಆ ಮೂಲಕ ಭಾರತದ ಯುಪಿಐ ಪಾವತಿ ಸೇವೆಯನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಬೇಕು ಎನ್ನುವ ಪ್ರಧಾನಿ ಮೋದಿ ಅವರ ದೂರದೃಷ್ಟಿ ಇಂಬು ನೀಡುವಂತಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಫ್ರಾನ್ಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿ, 'ಭಾರತದ UPI ಔಪಚಾರಿಕವಾಗಿ ಐಕಾನಿಕ್ ಐಫೆಲ್ ಟವರ್‌ನಲ್ಲಿ ಬೃಹತ್ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿದ್ಯುಕ್ತ ಚಾಲನೆ ಪಡೆದಿದ್ದು, ಪ್ರಧಾನಿ ಮೋದಿ ಅವರ ಘೋಷಣೆ ಮತ್ತು UPI ಅನ್ನು ಜಾಗತಿಕವಾಗಿ ತೆಗೆದುಕೊಳ್ಳುವ ದೃಷ್ಟಿಯನ್ನು ಕಾರ್ಯಗತಗೊಳಿಸಲಾಗುತ್ತಿದೆ" ಎಂದು ಟ್ವೀಟ್ ಮಾಡಿದೆ.

ಈ ಟ್ವೀಟ್ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, "ಇದನ್ನು ನೋಡಲು ಅದ್ಭುತವಾಗಿದೆ. ಇದು ಯುಪಿಐನ ಜಾಗತಿಕ ಮಟ್ಟದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಮತ್ತು ಬಲವಾದ ಸಂಬಂಧಗಳನ್ನು ಬೆಳೆಸಲು ಇದು ಅದ್ಭುತ ಉದಾಹರಣೆಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಪ್ರಾಸಂಗಿಕವಾಗಿ, ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಜನವರಿ 26 ರಂದು ನವದೆಹಲಿಯಲ್ಲಿ 75 ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು.

ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) 2016 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಭಾರತೀಯ ತ್ವರಿತ ಪಾವತಿ ವ್ಯವಸ್ಥೆಯಾಗಿದೆ. ಯುಪಿಐ ಎನ್ನುವುದು ಎನ್‌ಪಿಸಿಐ ಪ್ರಕಾರ, ಹಲವಾರು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ಗೆ (ಯಾವುದೇ ಭಾಗವಹಿಸುವ ಬ್ಯಾಂಕ್‌ನ) ಕಾರ್ಯಗತಗೊಳಿಸುವ ವ್ಯವಸ್ಥೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

India- US Relationship: ನಿಮ್ಮ ಭಾವನೆಗಳನ್ನು ಆಳವಾಗಿ ಗೌರವಿಸುತ್ತೇನೆ-ಬೆಂಬಲಿಸುತ್ತೇನೆ: ಸದಾಕಾಲ ಸ್ನೇಹಿತನಾಗಿರುತ್ತೇನೆಂದ ಟ್ರಂಪ್'ಗೆ ಮೋದಿ ಉತ್ತರ

ಮೋದಿ ಉತ್ತಮ-ಅದ್ಭುತ ಪ್ರಧಾನಿ, ಅವರೊಂದಿಗೆ ಎಂದಿಗೂ ಸ್ನೇಹಿತರಾಗಿರುತ್ತೇನೆ, ಭಾರತ-ಅಮೆರಿಕಾ ನಡುವೆ ವಿಶೇಷ ಬಾಂಧವ್ಯವಿದೆ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

EVM ಬದಲು ಬ್ಯಾಲಟ್ ಪೇಪರ್ ಬಳಕೆಗೆ ನಿರ್ಧಾರ: ಸರ್ಕಾರದ ವಿರುದ್ಧ BJP ವಾಗ್ದಾಳಿ, ನಮ್ಮ ಅನುಭವದ ಮೇಲೆ ತೀರ್ಮಾನಿಸಿದ್ದೇವೆಂದ ಸಿಎಂ ಸಿದ್ದರಾಮಯ್ಯ

ಇಸ್ಲಾಂ ಎಂದರೆ ಶಾಂತಿ, ಬಸವಣ್ಣರಂತೆ ಪ್ರವಾದಿಗಳು ಕೆಲಸ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

2 ಕೋಟಿ ರೂ. ಅನುದಾನಕ್ಕೆ ಕೃಷಿ ಸಚಿವರೇ ಸಿಎಂ ಬಳಿ ಅಂಗಲಾಚಬೇಕೆಂದರೆ ಸರ್ಕಾರ ಎಷ್ಟು ದಿವಾಳಿಯಾಗಿದೆ ಎಂದು ನೀವೇ ಊಹಿಸಿಕೊಳ್ಳಿ..!

SCROLL FOR NEXT