ದೇಶ

13 ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್!

Srinivas Rao BV

ಚೆನ್ನೈ: ಇಲ್ಲಿನ 13 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಗಳು ಬಂದಿದ್ದು, ಕೆಲ ಕಾಲ ಆತಂಕ ಮೂಡಿಸಿತ್ತು. 

ಇ-ಮೇಲ್ ಬೆದರಿಕೆ ಪರಿಣಾಮ ವಿದ್ಯಾರ್ಥಿಗಳನ್ನು ಶಾಲ ಅವಧಿ ಮುಗಿಯುವುದಕ್ಕೂ ಮುನ್ನ ಮನೆಗೆ ಕಳುಹಿಸಲಾಯಿತು. ಇ-ಮೇಲ್ ಗಳನ್ನು ಪರಿಶೀಲನೆ ಮಾಡಿದ ಬಳಿಕ ಹುಸಿ ಬೆದರಿಕೆ ಇದಾಗಿದೆ ಎಂಬುದು ದೃಢಪಟ್ಟಿದೆ. ಇ-ಮೇಲ್ ಕಳಿಸಿದವನ ಗುರುತನ್ನು ಪತ್ತೆ ಮಾಡಲು ಶೋಧಕಾರ್ಯಾಚರಣೆ ನಡೆಯುತ್ತಿದೆ. 

ಒಟ್ಟು 13 ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿಗಳನ್ನು ಕರೆಸಿ ಪರಿಶೀಲನೆ ನಡೆಸಲಾಯಿತು. ಸಾರ್ವಜನಿಕರು ಭಯಪಡಬೇಕಿಲ್ಲ  ಈ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಗುರುತಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಜಿಸಿಪಿ ಸಹಾಯಕ ಪೊಲೀಸ್ ಆಯುಕ್ತ ಪ್ರೇಮ್ ಆನಂದ್ ಸಿನ್ಹಾ ತಿಳಿಸಿದ್ದಾರೆ.

ಬೆಳಗ್ಗೆ 10.30 ರಿಂದ 11.00 ರ ನಡುವೆ ಪೊಲೀಸರಿಗೆ ಇಮೇಲ್‌ಗಳ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸಿನ್ಹಾ ಹೇಳಿದ್ದಾರೆ. ಶಾಲೆಗಳಿಂದ ಮಾಹಿತಿ ಪಡೆದ ನಂತರ ಅಥವಾ ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿ ಸುದ್ದಿ ನೋಡಿದ ನಂತರ ಪೋಷಕರು ಗೋಪಾಲಪುರಂ, ಮೊಗಪ್ಪೈರ್, ಪ್ಯಾರಿಸ್ ಮತ್ತು ಅಣ್ಣಾನಗರದಂತಹ ಪ್ರದೇಶಗಳ ಶಾಲೆಗಳಿಗೆ ಧಾವಿಸಿದರು.

SCROLL FOR NEXT