ದೇಶ

ಲೋಕಸಭಾ ಚುನಾವಣೆ: ಹೊಸ ಮೈತ್ರಿಗೆ ಸ್ವಾಗತ, ಎಸ್‌ಎಡಿ ಜೊತೆಗೆ ಮಾತುಕತೆ- ಅಮಿತ್ ಶಾ

Nagaraja AB

ನವದೆಹಲಿ: ಭಾರತೀಯ ಜನತಾ ಪಕ್ಷ  ಕುಟುಂಬ ರಾಜಕಾರಣದಲ್ಲಿ ನಂಬಿಕೆ ಹೊಂದಿಲ್ಲ. ಯಾವಾಗಲೂ ಹೊಸ ಮಿತ್ರರನ್ನು ಸ್ವಾಗತಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಅಲ್ಲದೇ, ಶಿರೋಮಣಿ ಅಕಾಲಿ ದಳದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. 

ಸಮಾರಂಭವೊಂದರಲ್ಲಿ ಮಾತನಾಡಿದ ಶಾ, ಲೋಕಸಭೆ ಚುನಾವಣೆಗೂ ಮುನ್ನಾ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಒತ್ತಿ ಹೇಳಿದರು. ಬಿಜೆಪಿ 370 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಚುನಾವಣೆಯಲ್ಲಿ ಎನ್‌ಡಿಎ 543 ರಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದರು.

ಜಯಂತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳ, ಶಿರೋಮಣಿ ಅಕಾಲಿದಳ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಎನ್ ಡಿಎ ಸೇರುವ ಸಾಧ್ಯತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, "ನಾವು ಕುಟುಂಬ ಯೋಜನೆಯನ್ನು (ಸಾಮಾನ್ಯವಾಗಿ) ನಂಬುತ್ತೇವೆ ಆದರೆ ರಾಜಕೀಯದಲ್ಲಿ ಅಲ್ಲ ಎಂದು ಹೇಳಿದರು.

"ನಮ್ಮ ಮೈತ್ರಿ ಬೆಳೆಯಬೇಕೆಂದು ಯಾವಾಗಲೂ ಬಯಸುತ್ತೇವೆ ಮತ್ತು ನಾವು ಯಾವಾಗಲೂ ಹೊಸ ಮಿತ್ರರನ್ನು ಸ್ವಾಗತಿಸುತ್ತೇವೆ. ನಮ್ಮ ಸಿದ್ಧಾಂತವು ಜನಸಂಘದ ದಿನಗಳಿಂದಲೂ ಹಾಗೆಯೇ ಉಳಿದಿದೆ. ನಮ್ಮೊಂದಿಗೆ ಸೇರಲು ಇಷ್ಟಪಡುವವರು ಬರಬಹುದು ಎಂದು ಅವರು ET NOW ಜಾಗತಿಕ ವ್ಯಾಪಾರ ಶೃಂಗಸಭೆ 2024 ರಲ್ಲಿ ಹೇಳಿದರು.

ಎನ್‌ಡಿಎಗೆ ಎಸ್‌ಎಡಿ ಮರುಪ್ರವೇಶದ ಕುರಿತು ಮಾತುಕತೆಗಳು ನಡೆಯುತ್ತಿವೆ ಆದರೆ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ತಿಳಿಸಿದರು. ಮೂರು ಪ್ರಮುಖ ಕೃಷಿ ಕಾನೂನುಗಳ ರದ್ದು ವಿಚಾರದಲ್ಲಿ ಸುಖ್‌ಬೀರ್ ಸಿಂಗ್ ಬಾದಲ್ ನೇತೃತ್ವದ ಎಸ್‌ಎಡಿ 2020 ರ ಸೆಪ್ಟೆಂಬರ್‌ನಲ್ಲಿ ಎನ್‌ಡಿಎಯಿಂದ ಹಿಂದೆ ಸರಿದಿತ್ತು.

2018 ರಲ್ಲಿ ಎನ್‌ಡಿಎ ತೊರೆದ ಟಿಡಿಪಿ ಅಥವಾ ವೈಎಸ್‌ಆರ್ ಕಾಂಗ್ರೆಸ್ ಜೊತೆ ಕೈಜೋಡಿಸುವ ಸಾಧ್ಯತೆಯ ಕುರಿತು ಮಾತನಾಡಿದ ಅಮಿತ್ ಶಾ, "ಇಂತಹ ವೇದಿಕೆಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸುವುದಿಲ್ಲ, ಸ್ವಲ್ಪ ಸಮಯ ಕಾಯಿರಿ, ಎಲ್ಲವೂ ಎಲ್ಲರಿಗೂ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

SCROLL FOR NEXT