ಸಾಂದರ್ಭಿಕ ಚಿತ್ರ 
ದೇಶ

ಒಡಿಶಾ: ಚಿತೆಗೆ ಬೆಂಕಿ ಹಚ್ಚುವ ಮುನ್ನಾ ಕಣ್ಣು ತೆರೆದ ಮಹಿಳೆ!

ಮನೆಯಲ್ಲಿ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸ್ಮಶಾನಕ್ಕೆ ಹೊತೊಯ್ಯಲಾಗಿದ್ದ 52 ವರ್ಷದ ಮಹಿಳೆಯೊಬ್ಬರು ಚಿತೆಗೆ ಬೆಂಕಿ ಹಚ್ಚುವ ಮುನ್ನಾ ಕಣ್ಣು ತೆರೆದಿದ್ದಾರೆ. ಹೌದು. ಅಚ್ಚರಿಯಾದರೂ ಇದು ನಿಜ. ದಕ್ಷಿಣ ಜಿಲ್ಲೆ ಗಂಜಾಂನ ಬೆರ್ಹಾಂಪುರ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ ಎಂದು ಕುಟುಂಬ ಮಂಗಳವಾರ ತಿಳಿಸಿದೆ.

ಗಂಜಾಂ: ಮನೆಯಲ್ಲಿ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸ್ಮಶಾನಕ್ಕೆ ಹೊತೊಯ್ಯಲಾಗಿದ್ದ 52 ವರ್ಷದ ಮಹಿಳೆಯೊಬ್ಬರು ಚಿತೆಗೆ ಬೆಂಕಿ ಹಚ್ಚುವ ಮುನ್ನಾ ಕಣ್ಣು ತೆರೆದಿದ್ದಾರೆ. ಹೌದು. ಅಚ್ಚರಿಯಾದರೂ ಇದು ನಿಜ. ದಕ್ಷಿಣ ಜಿಲ್ಲೆ ಗಂಜಾಂನ ಬೆರ್ಹಾಂಪುರ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ ಎಂದು ಕುಟುಂಬ ಮಂಗಳವಾರ ತಿಳಿಸಿದೆ.

ಸೋಮವಾರ ಸಂಜೆ ಸ್ಮಶಾನದಿಂದ ಮನೆಗೆ ಮರಳಿದ ನಂತರ ಮಹಿಳೆಯ ಕುಟುಂಬ ಸದಸ್ಯರು ಅವರನ್ನು ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಡ ಕುಟುಂಬಕ್ಕೆ ಸೇರಿದ ಮಹಿಳೆ ಫೆಬ್ರವರಿ 1 ರಂದು ಮನೆಯಲ್ಲಿ ಬೆಂಕಿ ಆಕಸ್ಮಿಕದಲ್ಲಿ ಶೇ.50 ರಷ್ಟು ಸುಟ್ಟ ಗಾಯಗಳಿಂದಾಗಿ ಅದೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಸ್ಪತ್ರೆಯ ಅಧಿಕಾರಿಗಳು ಆಕೆಯನ್ನು ಬೇರೆ ಕಡೆಗೆ ಕರೆದೊಯ್ಯಲು ಸೂಚಿಸಿದಾಗ ಹಣದ ಕೊರತೆಯಿಂದಾಗಿ ಪತಿ ಮನೆಗೆ ಕರೆದೊಯ್ದಿದ್ದರು. ಅಂದಿನಿಂದ ಆಕೆ ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸೋಮವಾರ, ಆಕೆ ಕಣ್ಣು ತೆರೆಯುತ್ತಿರಲ್ಲಿಲ್ಲ ಮತ್ತು ಉಸಿರಾಡುತ್ತಿಲ್ಲ ಎಂದು ಕಂಡುಬಂದಾಗ ಸತ್ತಿರಬಹುದೆಂದು  ಭಾವಿಸಿದ್ದೇವೆ. ನಂತರ ಇತರರಿಗೆ ತಿಳಿಸಿದ್ದೇವೆ ಎಂದು ಆಕೆಯ ಪತಿ ಸಿಬರಮ್ ಪಾಲೋ ಹೇಳಿದರು. ವೈದ್ಯರನ್ನು ಸಂಪರ್ಕಿಸದೆ ಅಥವಾ ಮರಣ ಪ್ರಮಾಣಪತ್ರವನ್ನು ಪಡೆಯಲು ಪ್ರಯತ್ನಿಸದೆ, ಅವರು ಬರ್ಹಾಂಪುರ ಮುನ್ಸಿಪಲ್ ಕಾರ್ಪೊರೇಶನ್‌ನ ಶವ ಸಾಗಿಸುವ ವಾಹನದಲ್ಲಿ ದೇಹವನ್ನು ಬಿಜಿಪುರ ಬಳಿಯ ಸ್ಮಶಾನಕ್ಕೆ ಕೊಂಡೊಯ್ದಿದ್ದರು ಎನ್ನಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT