ಕರ್ನಾಟಕ ಚುನಾವಣೆ: ಬಿಜೆಪಿ ಪಕ್ಷದ ಮೂರು ಜಾಹೀರಾತುಗಳ ಪ್ರಸಾರಕ್ಕೆ ಚುನಾವಣಾ ಆಯೋಗ ನಿಷೇಧ 
ದೇಶ

ಚುನಾವಣಾ ಬಾಂಡ್‌ಗಳ ಮಾರಾಟದ ಮೂಲಕ 6,565 ಕೋಟಿ ರೂ. ಗಳಿಸಿದ ಬಿಜೆಪಿ!

ನವದೆಹಲಿ: ಚುನಾವಣಾ ಬಾಂಡ್‌ಗಳ ಮೂಲಕ ವಿವಿಧ ರಾಜಕೀಯ ಪಕ್ಷಗಳು ಇಲ್ಲಿಯವರೆಗೆ 16,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಡೆದಿವೆ. ಅದರಲ್ಲಿ ಆಡಳಿತರೂಢ ಬಿಜೆಪಿಗೆ ಸಿಂಹ ಪಾಲು ಹೋಗಿದೆ ಎಂದು ಅಂದಾಜಿಸಲಾಗಿದೆ.

ಚುನಾವಣಾ ಆಯೋಗ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR)ಲಭ್ಯವಾದ ಮಾಹಿತಿ ಪ್ರಕಾರ, ಈಗ ರದ್ದಾದ ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು 2018 ರಲ್ಲಿ ಪರಿಚಯಿಸಿದ ನಂತರ ಎಲ್ಲಾ ರಾಜಕೀಯ ಪಕ್ಷಗಳು ಕಳೆದ ಆರ್ಥಿಕ ವರ್ಷದವರೆಗೆ 12,000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಪಡೆದಿವೆ. ಇದರಲ್ಲಿ ಆಡಳಿತಾರೂಢ ಬಿಜೆಪಿಯು ಸುಮಾರು ಶೇ. 55 ರಷ್ಟು ಅಥವಾ 6,565 ಕೋಟಿ ರೂ. ಪಡೆದಿವೆ.

ವಿವಿಧ ರಾಜಕೀಯ ಪಕ್ಷಗಳು ಮಾರ್ಚ್ 2018 ಮತ್ತು ಜನವರಿ 2024 ರ ನಡುವೆ ಚುನಾವಣಾ ಬಾಂಡ್‌ಗಳ ಮಾರಾಟದ ಮೂಲಕ ಒಟ್ಟು 16,518.11 ಕೋಟಿ ರೂ. ಸಂಗ್ರಹಿಸಿವೆ ಎಂದು ಎಡಿಆರ್ ತಿಳಿಸಿದೆ.

ಯುಪಿಎ-2ರ ಕೊನೆಯ ವರ್ಷದಿಂದ ಬಿಜೆಪಿಯು ಕಾಂಗ್ರೆಸ್ ಅನ್ನು ಹಿಂದಿಕ್ಕಿ ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರ ಹೊಮ್ಮಿತು. 2013-14ರ ಹಣಕಾಸು ವರ್ಷದಲ್ಲಿ ಕಾಂಗ್ರೆಸ್‌ ಒಟ್ಟು 598 ಕೋಟಿ ರೂ. ಮತ್ತು ಬಿಜೆಪಿ ಒಟ್ಟು 673.8 ಕೋಟಿ ರೂ. ಹೊಂದಿತ್ತು.

ಅಲ್ಲಿಂದೀಚೆಗೆ, ಬಿಜೆಪಿಯ ಆದಾಯವು ಏರಿಕೆಯಾದರೆ ಕಾಂಗ್ರೆಸ್ ನ ಆದಾಯ ಕುಸಿಯ ತೊಡಗಿತು.

2018-19ರಲ್ಲಿ, ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿದ ನಂತರದ ಮೊದಲ ಪೂರ್ಣ ಹಣಕಾಸು ವರ್ಷದಲ್ಲಿ, ಬಿಜೆಪಿಯ ಆದಾಯವು 2,410 ಕೋಟಿ ರೂ.ಗೆ (ರೂ. 1,027 ಕೋಟಿ) ದ್ವಿಗುಣಗೊಂಡಿದ್ದರೆ, ಕಾಂಗ್ರೆಸ್‌ನ ಆದಾಯ 199 ಕೋಟಿ ರೂ.ನಿಂದ ರೂ.918 ಕೋಟಿಗೆ ಏರಿತು.

ಕಳೆದ 2022-23ರ ಆರ್ಥಿಕ ವರ್ಷದಲ್ಲಿ ಬಿಜೆಪಿಯ ಒಟ್ಟು ಆದಾಯ 2,360 ಕೋಟಿ ರೂ.ಗಳಾಗಿದ್ದು, ಅದರಲ್ಲಿ ಸುಮಾರು 1,300 ಕೋಟಿ ರೂ. ಚುನಾವಣಾ ಬಾಂಡ್‌ಗಳ ಮೂಲಕ ಬಂದಿದೆ. ಅದೇ ವರ್ಷದಲ್ಲಿ ಕಾಂಗ್ರೆಸ್ ತನ್ನ ಒಟ್ಟು ಆದಾಯ 452 ಕೋಟಿ ರೂ.ಗೆ ಕುಸಿದಿದ್ದು, ಅದರಲ್ಲಿ 171 ಕೋಟಿ ರೂ. ಎಲೆಕ್ಟೋರಲ್ ಬಾಂಡ್ ಮೂಲಕ ಬಂದಿದೆ.

ಇತರ ಪಕ್ಷಗಳ ಪೈಕಿ, ಕಳೆದ ಹಣಕಾಸು ವರ್ಷದಲ್ಲಿ ಈ ಬಾಂಡ್‌ಗಳ ಮೂಲಕ ಟಿಎಂಸಿ 325 ಕೋಟಿ ರೂ. ಪಡೆದಿದ್ದರೆ, ಬಿಆರ್‌ಎಸ್‌ 529 ಕೋಟಿ, ಡಿಎಂಕೆ 185 ಕೋಟಿ, ಬಿಜೆಡಿ 152 ಕೋಟಿ ಮತ್ತು ಟಿಡಿಪಿ 34 ಕೋಟಿ ರೂ. ಪಡೆದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!