ಕಾಂಗ್ರೆಸ್
ಕಾಂಗ್ರೆಸ್ TNIE
ದೇಶ

ಐಟಿ ಇಲಾಖೆ ಸ್ಥಗಿತಗೊಳಿಸಿದ್ದ ಕಾಂಗ್ರೆಸ್ ಬ್ಯಾಂಕ್ ಖಾತೆಗಳು ಮತ್ತೆ ಸಕ್ರಿಯ!

Srinivas Rao BV

ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ ಸ್ಥಗಿತಗೊಂಡಿದ್ದ ಕಾಂಗ್ರೆಸ್ ನ ಬ್ಯಾಂಕ್ ಖಾತೆಗಳನ್ನು ಇಲಾಖೆಯ ಮೇಲ್ಮನವಿ ನ್ಯಾಯಮಂಡಳಿ ಮರುಸ್ಥಾಪಿಸಿದ್ದು ವಿಚಾರಣೆಯನ್ನು ಮುಂದಿನ ವಾರಕ್ಕೆ ನಿಗದಿಪಡಿಸಿದೆ. ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿದ್ದರ ಪರಿಣಾಮ ಪಕ್ಷದ ಎಲ್ಲಾ ಚಟುವಟಿಕೆಗಳಿಗೆ ಅಡಚಣೆ, ತೊಂದರೆ ಉಂಟಾಗಿತ್ತು.

ಪಕ್ಷದ ಖಜಾಂಚಿಯಾಗಿರುವ ಅಜಯ್ ಮಕೇನ್ ಈ ಬೆಳವಣಿಗೆ ಬಗ್ಗೆ ಮಾತನಾಡಿ ಪಕ್ಷ ತನ್ನ ಐಟಿ ರಿಟರ್ನ್ಸ್ ಸಲ್ಲಿಕೆಯಲ್ಲಿ ಕೆಲವು ದಿನಗಳ ವಿಳಂಬ ಮಾಡಿದ್ದಕ್ಕಾಗಿ ಆದಾಯ ತೆರಿಗೆ ಇಲಾಖೆ ಪಕ್ಷಕ್ಕೆ ಸಂಬಂಧಿಸಿದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ, ಈ ರೀತಿ ಮಾಡುವುದಕ್ಕೆ ಇದೊಂದು ದುರ್ಬಲ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಪಕ್ಷದ ಪರವಾಗಿ ನ್ಯಾಯಮಂಡಳಿ ಎದುರು ಹಾಜರಾದ ವಿವೇಕ್ ತನ್ಖಾ, ಒಂದು ವೇಳೆ ಖಾತೆಗಳು ದೀರ್ಘಾವಧಿಗೆ ಸ್ಥಗಿತಗೊಂಡಿದ್ದೇ ಆದಲ್ಲಿ ಚುನಾವಣೆಗಳಲ್ಲೂ ಪಕ್ಷ ಭಾಗಿಯಾಗುವುದಕ್ಕೆ ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ತಾತ್ಕಾಲಿಕವಾಗಿ ಬ್ಯಾಂಕ್ ಖಾತೆಗಳನ್ನು ಮರುಸ್ಥಾಪಿಸಲಾಗಿದ್ದು, ನ್ಯಾಯಮಂಡಳಿ ಮುಂದಿನ ವಾರ ಈ ಬಗ್ಗೆ ವಿಚಾರಣೆ ನಡೆಸಿ ಅಂತಿಮ ತೀರ್ಪು ಪ್ರಕಟಿಸಲಿದೆ.

SCROLL FOR NEXT