ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)
ರೈತರ ಪ್ರತಿಭಟನೆ (ಸಂಗ್ರಹ ಚಿತ್ರ) 
ದೇಶ

"ನಮ್ಮ ಧ್ವನಿ ಅಡಗಿಸಲಾಗುತ್ತಿದೆ": ಕೇಂದ್ರದಿಂದ ರೈತರ ಸಾಮಾಜಿಕ ಜಾಲತಾಣಗಳು ಸ್ಥಗಿತ- ರೈತ ನಾಯಕ

Srinivas Rao BV

ಚಂಡೀಗಢ: ಬೆಂಬಲ ಬೆಲೆಗೆ ಆಗ್ರಹಿಸಿ ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ರೈತರ ಸಮಾಜಿಕ ಜಾಲತಾಣಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ. ರೈತ ನಾಯಕ ಸರ್ವನ್ ಸಿಂಗ್ ಪಂಧೀರ್ ಕೇಂದ್ರದ ವಿರುದ್ಧ ಈ ಆರೋಪ ಹೊರಿಸಿದ್ದು, ನಮ್ಮ ಧ್ವನಿ ಅಡಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರತಿಭಟನಾ ನಿರತ ರೈತರನ್ನು ಪಂಜಾಬ್-ಹರ್ಯಾಣ ಗಡಿ ಭಾಗದ ಶಂಭು ಹಾಗೂ ಖನೌರಿ ಪಾಯಿಂಟ್ ಗಳಲ್ಲಿ ತಡೆಹಿಡಿಯಲಾಗಿದೆ. ಫೆ.8, 12, 15 ರಂದು ರೈತ ನಾಯಕರೊಂದಿಗೆ ಕೇಂದ್ರ ಸಚಿವರು ಸಭೆ ನಡೆಸಿದ್ದರು ಆದರೆ ಯಾವುದೇ ನಿರ್ಣಾಯಕ ಫಲಿತಾಂಶ ಹೊರಬಂದಿಲ್ಲ. ಫೆ.18 ರಂದು ರೈತ ನಾಯಕರು ಹಾಗೂ ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

ವರದಿಗಾರರೊಂದಿಗೆ ಮಾತನಾಡಿರುವ ರೈತ ನಾಯಕ ಪಂಧೀರ್, ಕಳೆದ ಸಭೆಯಲ್ಲಿ ಕೇಂದ್ರ ಸಚಿವರ ಬಳಿ ನಾವು ನಮ್ಮ ಬೇಡಿಕೆಗಳನ್ನು ಪ್ರಸ್ತಾಪಿಸಿದ್ದೆವು ಹಾಗೂ ರೈತ ನಾಯಕರ ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಿರುವುದರ ವಿಷಯವನ್ನೂ ಪ್ರಸ್ತಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ರೈತ ಪ್ರತಿಭಟನೆಗಳನ್ನು ಪ್ರಸಾರ ಮಾಡುತ್ತಿದ್ದ 70 ಯೂಟ್ಯೂಬ್ ಖಾತೆಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ. ನಮ್ಮ ಧ್ವನಿಯನ್ನು ಅಡಗಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಪಂಧೀರ್ ಆರೋಪಿಸಿದ್ದಾರೆ. ಸರ್ಕರ ಪ್ರತಿಭಟನಾ ರೈತರ ಮೇಲೆ ಭದ್ರತಾ ಸಿಬ್ಬಂದಿಗಳ ಮೂಲಕ ಬಲ ಪ್ರಯೋಗ ಮಾಡುತ್ತಿರುವುದರ ಪರಿಣಾಮ 70 ಕ್ಕೂ ಹೆಚ್ಚು ರೈತರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪಂಧೀರ್ ಹೇಳಿದ್ದಾರೆ.

SCROLL FOR NEXT