ದೇಶ

INSAT-3DS ಗೆ ತುಂಟ ಹುಡುಗ (naughty boy) ಎಂಬ ಹೆಸರು ಬಂದಿದ್ದೇಕೆ?: ಇಸ್ರೋ ಉತ್ತರ ಹೀಗಿದೆ...

Srinivas Rao BV

ನವದೆಹಲಿ: ಭಾರತದ ವಿಶೇಷ ಹವಾಮಾನ ಉಪಗ್ರಹವಾದ INSAT-3DS ನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಹೊಸ ಮೈಲುಗಲ್ಲು ಸಾಧನೆಯಾಗಿದೆ. ಇಸ್ರೋ ಸಂಸ್ಥೆಯ ಈ ಯಶಸ್ಸನ್ನು ಸಂಭ್ರಮಿಸಬೇಕಾದ ಈ ಹೊತ್ತಿನಲ್ಲಿ, ಎಲ್ಲರ ಗಮನ ಸೆಳೆಯುತ್ತಿರುವ ಮತ್ತೊಂದು ಅಂಶ INSAT-3DS ಗೆ ನೀಡಲಾಗಿದ್ದ ತುಂಟ ಹುಡುಗ ಅಥವಾ (naughty boy) ಎಂಬ ಅಡ್ಡ ಹೆಸರು.

ಇಂತಹ ವಿಚಿತ್ರ ಹೆಸರನ್ನು ಇಸ್ರೋ ಈ ಉಪಗ್ರಹಕ್ಕೆ ನೀಡಿದ್ದು ಏಕೆ ಎಂಬ ಬಗ್ಗೆ ಸ್ವತಃ ಬಾಹ್ಯಾಕಾಶ ಸಂಸ್ಥೆಯೇ ಉತ್ತರ ನೀಡಿದೆ. ಈ ಜಿಎಸ್ಎಲ್ ವಿ ರಾಕೆಟ್ ನ ಅಸ್ಥಿರ ದಾಖಲೆಯ ಕಾರಣದಿಂದಾಗಿ ಇದಕ್ಕೆ ತುಂಟ ಹುಡುಗ ಅಥವಾ (naughty boy) ಎಂಬ ಅಡ್ಡ ಹೆಸರು ನೀಡಲಾಗಿತ್ತು.

ಪದೇ ಪದೇ ಈ ಜಿಎಸ್ ಎಲ್ ವಿಗೆ ಸಮಸ್ಯೆಗಳು ಎದುರಾಗಿದ್ದೇಕೆ?

ಈ ಜಿಎಸ್ ಎಲ್ ವಿಯ ಉಡಾವಣೆಯನ್ನು ಈ ಹಿಂದೆ 15 ಬಾರಿ ಉಡಾವಣೆ ಮಾಡಲು ಯತ್ನಿಸಲಾಗಿತ್ತಾದರೂ 4 ಬಾರಿ ಅದು ವಿಫಲಗೊಂಡಿತ್ತು. ಇದಕ್ಕೆ ಹೋಲಿಕೆ ಮಾಡಿಕೊಂಡಲ್ಲಿ ಪಿಎಸ್ ಎಲ್ ವಿ ಗಳ ಪೈಕಿ 60 ರಲ್ಲಿ 3 ಮಿಷನ್, 7 ಎಲ್ ವಿಎಂ-3 ನಲ್ಲಿ ಯಾವುದೇ ಉಡಾವಣೆಯೂ ವಿಫಲಗೊಳ್ಳದೇ ಯಶಸ್ವಿಯಾಗಿವೆ.

ಹಾಗಾದರೆ ಈ ಜಿಎಸ್ಎಲ್ ವಿಯಲ್ಲಿನ ಸಮಸ್ಯೆ ಏನಾಗಿತ್ತು?

INSAT-3DS ರಾಕೆಟ್ ನ ಕ್ರಯೋಜನಿಕ್ ಹಂತದಲ್ಲಿ ಸಮಸ್ಯೆ ಎದುರಾಗಿತ್ತು. GSLV-F10 ನ ಆಗಸ್ಟ್ 2021 ರ ವೈಫಲ್ಯದ ಉದಾಹರಣೆಯನ್ನು ನೋಡುವುದಾದರೆ, ಉಡಾವಣೆಯಾದ ಸುಮಾರು ಐದು ನಿಮಿಷಗಳ ನಂತರ, ಭೂ ವೀಕ್ಷಣಾ ಉಪಗ್ರಹ EOS-03 ನ್ನು ಹೊತ್ತ ರಾಕೆಟ್‌ನ ಹಾರಾಟ ತನ್ನ ನಿಗದಿತ ಪಥದಿಂದ ವಿಚಲಿತವಾಯಿತು. GSLV ಯ ಮೊದಲ ಮತ್ತು ಎರಡನೇ ಹಂತಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಿದವು ಮತ್ತು ಬೇರ್ಪಟ್ಟವು. ಆದರೆ ಅತ್ಯಂತ ಕಡಿಮೆ ತಾಪಮಾನದಲ್ಲಿ ದ್ರವ ಹೈಡ್ರೋಜನ್ ಮತ್ತು ದ್ರವ ಆಮ್ಲಜನಕದಿಂದ ಇಂಧನ ತುಂಬಿದ ಕ್ರಯೋಜೆನಿಕ್ ಎಂಜಿನ್‌ನಿಂದ ಚಾಲಿತ ಮೇಲಿನ ಹಂತವು ಬೆಂಕಿಹೊತ್ತಿಸಲು ವಿಫಲವಾದವು. ರಾಕೆಟ್ ಸಾಗಿಸುವ ಶಕ್ತಿಯನ್ನು ಕಳೆದುಕೊಂಡಿತು ಮತ್ತು ಅದರ ಅವಶೇಷಗಳು, ಉಪಗ್ರಹದ ಜೊತೆಗೆ, ಅಂಡಮಾನ್ ಸಮುದ್ರದಲ್ಲಿ ಬಿದ್ದಿತ್ತು.

ಇದೇ ರೀತಿಯ ಸಮಸ್ಯೆಯು ಏಪ್ರಿಲ್ 2010 ರಲ್ಲಿ GSLV-D3 ವೈಫಲ್ಯಕ್ಕೆ ಕಾರಣವಾಯಿತು. ಅದು ರಷ್ಯಾದ ವಿನ್ಯಾಸದ ಮಾದರಿಯ ಸ್ಥಳೀಯ ಕ್ರಯೋಜೆನಿಕ್ ಎಂಜಿನ್‌ನೊಂದಿಗೆ GSLV ಯ ಮೊದಲ ಉಡಾವಣೆಯಾಗಿ ಆಗಸ್ಟ್ 2021 ರಲ್ಲಿ ಉಡಾವಣೆಯನ್ನು ಹೋಲುತ್ತದೆ. ಕ್ರಯೋಜೆನಿಕ್ ಹಂತವು ಆ ಸಂದರ್ಭದಲ್ಲೂ ಉರಿಯಲು ವಿಫಲವಾಗಿತ್ತು.

ಎಂಟು ತಿಂಗಳ ನಂತರ, ಮುಂದಿನ ಜಿಎಸ್‌ಎಲ್‌ವಿ ಉಡಾವಣೆ ನಡೆದಿತ್ತು. ಆ ಬಾರಿ ರಷ್ಯಾದ ಕ್ರಯೋಜೆನಿಕ್ ಎಂಜಿನ್‌ನಿಂದ ಚಾಲಿತವಾಗಿತ್ತು. 1990 ರ ದಶಕದಲ್ಲಿ ಒಪ್ಪಂದದ ಭಾಗವಾಗಿ ರಷ್ಯಾ ಪೂರೈಸಿದ ಏಳರಲ್ಲಿ ಕೊನೆಯದು ಸಹ ವಿಫಲವಾಗಿತ್ತು. ವೈಫಲ್ಯದ ವಿಶ್ಲೇಷಣೆಯು ಕ್ರಯೋಜೆನಿಕ್ ಎಂಜಿನ್‌ನ ಎಲೆಕ್ಟ್ರಾನಿಕ್ಸ್‌ನಲ್ಲಿ ಅಸಮರ್ಪಕ ಕಾರ್ಯವನ್ನು ಕಂಡುಹಿಡಿದಿದೆ.

SCROLL FOR NEXT