ಸ್ವತಂತ್ರ ಸತ್ಯಶೋಧನಾ ತಂಡವನ್ನು ಬಂಧಿಸಿದ ಪೊಲೀಸರು
ಸ್ವತಂತ್ರ ಸತ್ಯಶೋಧನಾ ತಂಡವನ್ನು ಬಂಧಿಸಿದ ಪೊಲೀಸರು PTI
ದೇಶ

ಸಂದೇಶಖಾಲಿ ಪ್ರಕರಣ: ಮಾರ್ಗಮಧ್ಯೆ ಸ್ವತಂತ್ರ ಸತ್ಯಶೋಧನಾ ತಂಡವನ್ನು ಬಂಧಿಸಿದ ಪೊಲೀಸರು!

Vishwanath S

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಆರೋಪದ ಕುರಿತು ತನಿಖೆ ನಡೆಸಲು ತೆರಳುತ್ತಿದ್ದ ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಲ್ ನರಸಿಂಹ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಂದೇಶ್‌ಖಾಲಿಯ ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ನಾಲ್ಕಕ್ಕಿಂತ ಹೆಚ್ಚು ಜನರ ತಂಡವನ್ನು ಆ ಪ್ರದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವುದು ಸರಿಯಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಪ್ರದೇಶದಿಂದ 52 ಕಿಮೀ ದೂರದಲ್ಲಿರುವ ಭೋಜೆರ್‌ಹತ್ ಪ್ರದೇಶದಲ್ಲಿ ತಮ್ಮ ಬೆಂಗಾವಲು ಪಡೆಯನ್ನು ತಡೆದಿದ್ದಾರೆ.

ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಲ್ ನರಸಿಂಹ ರೆಡ್ಡಿ, ಮಾಜಿ ಐಪಿಎಸ್ ಅಧಿಕಾರಿ ರಾಜ್ ಪಾಲ್ ಸಿಂಗ್, ಮಾಜಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಾರು ವಾಲಿ ಖನ್ನಾ, ವಕೀಲರಾದ ಓ ಪಿ ವ್ಯಾಸ್ ಮತ್ತು ಭಾವನಾ ಬಜಾಜ್ ಮತ್ತು ಹಿರಿಯ ಪತ್ರಕರ್ತ ಸಂಜೀವ್ ನಾಯಕ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ಆರು ಮಂದಿಯನ್ನು ಪೊಲೀಸರು ಬಂಧಿಸಿ ವಾಹನದಲ್ಲಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ನಾವು ಕಾನೂನು ಪಾಲಿಸುತ್ತೇವೆ. ಯಾವುದೇ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಪೊಲೀಸ್ ಸಿಬ್ಬಂದಿಗೆ ಹೇಳಿದ್ದೇವು. ಸಂದೇಶಖಾಲಿಯಲ್ಲಿ ಯಾವುದೇ ಕರ್ಫ್ಯೂ ವಿಧಿಸಲಾಗಿಲ್ಲ. ಆದ್ದರಿಂದ ನಾವು ಎರಡು ಗುಂಪುಗಳಾಗಿ ಹೋಗಬಹುದು. ಹೀಗಾಗಿ ನಮ್ಮ ಇಬ್ಬರು ಮಹಿಳಾ ಸದಸ್ಯೆಯರಿಗೆ ಅವಕಾಶ ನೀಡಬೇಕು ಎಂದು ರೆಡ್ಡಿ ಹೇಳಿದರು.

ನಾವು ಅಲ್ಲಿಗೆ ಹೋದಾಗ ನಮ್ಮಗೆ ಸೆಕ್ಷನ್ 144ರ ಆದೇಶದ ಪ್ರತಿಯನ್ನು ನೀಡಲಾಗಿದೆ. "ದೇಶದ ನಾಗರಿಕ ಸಮಾಜದ ಸದಸ್ಯರು ಮಾನವ ಹಕ್ಕುಗಳ ಉಲ್ಲಂಘನೆಯ ಸಂತ್ರಸ್ತರೊಂದಿಗೆ ಸಂವಹನ ನಡೆಸುವುದನ್ನು ಯಾವುದೇ ಆಡಳಿತದಿಂದ ತಡೆಯಲು ಸಾಧ್ಯವಿಲ್ಲ. ಇನ್ನು ನಮ್ಮಗೆ ತಡೆಯೊಡ್ಡುವ ಮೂಲಕ ಸರ್ಕಾರ ಏನನ್ನು ಮರೆಮಾಡಲು ನೋಡುತ್ತಿದೆ ಎಂದರು.

SCROLL FOR NEXT