ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ 
ದೇಶ

ಕೇಂದ್ರದ ತಾರತಮ್ಯ ವಿರೋಧಿಸಿ ಮಾರ್ಚ್ 10 ರಂದು ಕೋಲ್ಕತ್ತಾದಲ್ಲಿ ಬ್ರಿಗೇಡ್ ರ್ಯಾಲಿ ಘೋಷಿಸಿದ ಟಿಎಂಸಿ

Lingaraj Badiger

ಕೋಲ್ಕತ್ತಾ: ಸಂದೇಶಖಾಲಿ ವಿಚಾರದಲ್ಲಿ ಬಿಜೆಪಿ ಮತ್ತು ಇತರ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಇಲ್ಲಿನ ಐಕಾನಿಕ್ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಮಾರ್ಚ್ 10 ರಂದು ಕೇಂದ್ರ ಸರ್ಕಾರದ ತಾರತಮ್ಯ ವಿರೋಧಿಸಿ ಮೆಗಾ ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ಭಾನುವಾರ ಘೋಷಿಸಿದೆ.

ಟಿಎಂಸಿ ವರಿಷ್ಠೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಿಜೆಪಿ ಮತ್ತು ಅದರ ರಾಷ್ಟ್ರೀಯ ನಾಯಕರನ್ನು ಉಲ್ಲೇಖಿಸಿ, 'ಜನ ಗರ್ಜನ್ ಸಭಾ' (ಜನಸಾಮಾನ್ಯರ ಘರ್ಜನೆ) ಶೀರ್ಷಿಕೆಯ ರ್ಯಾಲಿಯು ಬಂಗಾಳದಿಂದ "ಹೊರಗಿನ ಪೀಡಕರನ್ನು" ಹೊರಹಾಕುವ ಪ್ರತಿಜ್ಞೆ ಮಾಡಲಿದೆ ಎಂದು ಅಭಿಷೇಕ್ ಬ್ಯಾನರ್ಜಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಬ್ರಿಗೇಡ್ ಪರೇಡ್ ಮೈದಾನ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಅಲ್ಲಿ ನಡೆದ ರ್ಯಾಲಿಗಳು ಭಾರೀ ಪ್ರಮಾಣದಲ್ಲಿ ಗಮನ ಸೆಳೆಯುತ್ತವೆ.

SCROLL FOR NEXT