ಸಾಂದರ್ಭಿಕ ಚಿತ್ರ 
ದೇಶ

ಆಂಧ್ರಪ್ರದೇಶ: ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ, ನಾಲ್ವರು ಸಾವು

ಕಾಕಿನಾಡ: ಟೈರ್‌ ಪಂಕ್ಚರ್‌ ಆಗಿ ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಆಂಧ್ರದ ಕಾಕಿನಾಡ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಜಿಲ್ಲೆಯ ಪ್ರಟ್ಟಿಪಾಡು ಮಂಡಲದ ಪಡಲೆಮ್ಮ ದೇವಸ್ಥಾನದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಣ್ಣಾವರಂನಿಂದ ರಾಜಮಹೇಂದ್ರವರಂಗೆ ತೆರಳುತ್ತಿದ್ದ ಟ್ರಕ್ ಟೈರ್ ಪಂಕ್ಚರ್ ಆಗಿದ್ದು, ರಿಪೇರಿಗಾಗಿ ರಸ್ತೆಬದಿಯಲ್ಲಿ ನಿಲ್ಲಿಸಲು ಮುಂದಾದಾಗ ವೈಶಾಖದಿಂದ ರಾಜಮಹೇಂದ್ರವರಂಗೆ ತೆರಳುತ್ತಿದ್ದ ಬಸ್ಸು, ಟ್ರಕ್ ನೋಡಿಕೊಳ್ಳುತ್ತಿದ್ದ ಮೂವರು ಸಿಬ್ಬಂದಿಗೆ ಡಿಕ್ಕಿ ಹೊಡೆದಿದೆ. ಅಲ್ಲದೇ, ಅದೇ ಮಾರ್ಗದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಬ್ಬ ವ್ಯಕ್ತಿಯೂ ಡಿಕ್ಕಿಗೆ ಬಲಿಯಾಗಿದ್ದಾರೆ. ದುರಂತವೆಂದರೆ ಅಪಘಾತದಲ್ಲಿ ಸಿಲುಕಿದ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿದ ಪ್ರತ್ತಿಪಾಡು ಸಬ್ ಇನ್ಸ್‌ಪೆಕ್ಟರ್ ಪವನ್ ಕುಮಾರ್ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದು, ಪ್ರಕರಣ ದಾಖಲಿಸಿದ್ದಾರೆ,. ಘಟನೆಗೆ ಕಾರಣವಾದ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು