ದೇಶ

ಪಕ್ಷ ವಿರೋಧಿ ಚಟುವಟಿಕೆ: ದೆಹಲಿ ಬಿಜೆಪಿ ಯುವ ಘಟಕದ ಅಧ್ಯಕ್ಷ ಶಶಿ ಯಾದವ್ ಪಕ್ಷದಿಂದ ಉಚ್ಛಾಟನೆ

Nagaraja AB

ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ದೆಹಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿ ಯಾದವ್ ಅವರನ್ನು ಮಂಗಳವಾರ ಪಕ್ಷದಿಂದ ಉಚ್ಛಾಟಿಸಲಾಗಿದೆ. ಪಕ್ಷದ ಶಿಸ್ತಿನ ಆಧಾರದ ಮೇಲೆ ಯಾದವ್ ಅವರನ್ನು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಪಕ್ಷದಿಂದ ಹೊರಹಾಕಿದ್ದಾರೆ.

ಪಕ್ಷ ಅನುಮತಿ ನೀಡದಿದ್ದರೂ ಯಾದವ್ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳು, ಲೋಕಸಭೆ ಪ್ರಭಾರಿಗಳು ಮತ್ತು ಜಿಲ್ಲಾಧ್ಯಕ್ಷರ ನೇಮಕವನ್ನು ಘೋಷಿಸಿದ್ದಾರೆ ಎಂದು ಸಚ್‌ದೇವ ಅವರು ಹೊರಡಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಪಕ್ಷ ವಿರೋಧಿ ಮತ್ತು ಸಮಾಜವಿರೋಧಿ ಚಟುವಟಿಕೆ ಗಾಗಿ ಯಾದವ್‌ಗೆ ಕಳೆದ ಕೆಲವು ದಿನಗಳಿಂದ ಎಚ್ಚರಿಕೆ ನೀಡಲಾಗಿತ್ತು. ಆದರೆ ಅದನ್ನು ಅವರು ಧಿಕ್ಕರಿಸಿದ್ದರು. ಪಕ್ಷದ ಎಲ್ಲಾ ಎಂಟು ಮೋರ್ಚಾಗಳ ರಾಜ್ಯ ಪದಾಧಿಕಾರಿಗಳ ನೇಮಕವನ್ನು ರಾಜ್ಯ ನಾಯಕತ್ವ ಮಾಡಬೇಕಾಗಿತ್ತು. ಅವರನ್ನು ನೇಮಿಸುವ ಯಾದವ್ ಅವರ ಆದೇಶ ಅಶಿಸ್ತಿನ ವರ್ಗಕ್ಕೆ ಸೇರಿದೆ ಎಂದು ಅವರು ಹೇಳಿದ್ದಾರೆ. 

ಯಾದವ್ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ತಕ್ಷಣದ ಪ್ರತಿಕ್ರಿಯೆಗೆ ದೆಹಲಿ ಬಿಜೆಪಿ ಅಧ್ಯಕ್ಷರು ಲಭ್ಯವಾಗಿಲ್ಲ.

SCROLL FOR NEXT