ದೇಶ

ನಾವು ಮಸೀದಿ ಕಳೆದುಕೊಂಡೆವು, ಈಗ...: ಅಸಾದುದ್ದೀನ್ ಓವೈಸಿಯ ಎಚ್ಚರಿಕೆ ಏನು ಅಂದರೆ...

Srinivas Rao BV

ನವದೆಹಲಿ: ಅಸಾದುದ್ದೀನ್ ಓವೈಸಿ ಬಾಬ್ರಿ ಮಸೀದಿ ಬಗ್ಗೆ ಮಾತನಾಡಿದ್ದು, ಕಳೆದ 500 ವರ್ಷಗಳಿಂದ ಯಾವ ಸ್ಥಳದಲ್ಲಿ ಕುರಾನ್ ಪಠಿಸಲ್ಪಡುತ್ತಿತ್ತೋ ಅದು ಈಗ ನಮ್ಮ ಕೈಲಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಚಟುವಟಿಕೆಗಳ ಬಗ್ಗೆ ಗಮನ ಇರಿಸಬೇಕೆಂದು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮುಸ್ಲಿಂ ಯುವಕರಿಗೆ ಕರೆ ನೀಡಿದ್ದು, ದೇಶಾದ್ಯಂತ ಇರುವ ಮಸೀದಿಗಳು ಯಥಾಸ್ಥಿತಿಯಲ್ಲಿರುವಂತಾಗಬೇಕು ಎಂದು ಹೇಳಿದ್ದಾರೆ.

ಅಸಾದುದ್ದೀನ್ ಓವೈಸಿ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. "ಓವೈಸಿ ರಾಮ ಮಂದಿರ ಉದ್ಘಾಟನೆಯನ್ನು ಕೋಮುವಾದಕ್ಕೆ ಎಳೆದುತರಲು ಸಾಧ್ಯವಾದಷ್ಟೂ ಉತ್ತಮವಾಗಿ ಪ್ರಯತ್ನಿಸುತ್ತಿದ್ದಾರೆ. ಹೈದರಾಬಾದ್ ನಲ್ಲಿ 2020 ರಲ್ಲಿ ಸಚಿವಾಲಯವನ್ನು ನಿರ್ಮಿಸಲು ಎರಡು ಮಸೀದಿಯನ್ನು ಕೆಡವಲಾಗಿತ್ತು ಆಗ ಓವೈಸಿ ಏಕೆ ಸುಮ್ಮನಿದ್ದರು ಎಂದು ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಲವಿಯ ಪ್ರಶ್ನಿಸಿದ್ದಾರೆ.

ಜ.22 ರಂದು ರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ಈ ಹಂತದಲ್ಲಿ ಅಸಾದುದ್ದೀನ್ ಓವೈಸಿ ಹೇಳಿಕೆ ನೀಡಿದ್ದಾರೆ. 

"ಯುವಜನರೇ, ನಾನು ನಿಮಗೆ ಹೇಳುತ್ತಿದ್ದೇನೆ, ನಾವು ನಮ್ಮ ಮಸೀದಿಯನ್ನು ಕಳೆದುಕೊಂಡಿದ್ದೇವೆ ಮತ್ತು ಅಲ್ಲಿ ಏನು ಮಾಡಲಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ನಿಮ್ಮ ಹೃದಯದಲ್ಲಿ ನೋವು ಇಲ್ಲವೇ?" ಎಂದು ಸೋಮವಾರ ಭವಾನಿ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಓವೈಸಿ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

“ನಾವು 500 ವರ್ಷಗಳಿಂದ ಕುಳಿತು ಕುರಾನ್ ಪಠಿಸಿದ ಸ್ಥಳ ಇಂದು ನಮ್ಮ ಕೈಯಲ್ಲಿಲ್ಲ, ಯುವಕರೇ, ಸುನ್ಹೇರಿ ಮಸೀದಿ (ಸುವರ್ಣ ಮಸೀದಿ) ಇನ್ನೂ ಮೂರು-ನಾಲ್ಕು ಮಸೀದಿಗಳ ಬಗ್ಗೆ ಪಿತೂರಿ ನಡೆಯುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೇ? ದೆಹಲಿಯೂ ಸೇರಿದೆಯೇ? ವರ್ಷಗಳ ಕಠಿಣ ಪರಿಶ್ರಮದ ನಂತರ ನಾವು ಇಂದು ನಮ್ಮ ಸ್ಥಾನವನ್ನು ಸಾಧಿಸಿದ್ದೇವೆ. ನೀವು ಈ ವಿಷಯಗಳತ್ತ ಗಮನ ಹರಿಸಬೇಕು ಎಂದು ಓವೈಸಿ ಹೇಳಿದ್ದಾರೆ.

SCROLL FOR NEXT