ದೇಶ

ಕೋವಿಡ್ ರೂಪಾಂತರಿ ಜೆಎನ್​.1: ದೇಶದ 11 ರಾಜ್ಯಗಳಲ್ಲಿ 511 ಪ್ರಕರಣ ಪತ್ತೆ; ನಂ.1 ಸ್ಥಾನದಲ್ಲಿ ಕರ್ನಾಟಕ!

Manjula VN

ನವದೆಹಲಿ: ಮಹಾಮಾರಿ ಕೊರೋನಾ ವೈರಸ್​ನ ರೂಪಾಂತರಿ JN.1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ದೇಶಾದ್ಯಂತ ಆತಂಕ ಹೆಚ್ಚಾಗತೊಡಗಿದ್ದು, ಕೋವಿಡ್ ಸೋಂಕಿತರ ಜೊತೆ ಜೊತೆಗೆ ರೂಪಾಂತರಿ JN.1 ಪ್ರಕರಣಗಳ ಸಂಖ್ಯೆ 511ಕ್ಕೆ ಏರಿದೆ.

ದೇಶದ ಒಟ್ಟು 11 ರಾಜ್ಯಗಳಲ್ಲಿ (ಗೋವಾ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ದೆಹಲಿ, ರಾಜಸ್ಥಾನ, ಒಡಿಶಾ, ಹರಿಯಾಣ, ಗುಜರಾತ್) ರೂಪಾಂತರಿ ವೈರಸ್ JN.1 ಪತ್ತೆಯಾಗಿದ್ದು, ಈ ಪೈಕಿ ಕರ್ನಾಟಕದಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಜೆಎನ್‌.1 ವೈರಸ್ ಕರ್ನಾಟಕದಲ್ಲಿ ಇದುವರೆಗೆ 199 ಪ್ರಕರಣಗಳ ಪತ್ತೆಯಾಗಿದ್ದರೆ, ಕೇರಳದಲ್ಲಿ 148, ಗೋವಾ 47, ಗುಜರಾತ್‌ 36, ಮಹಾರಾಷ್ಟ್ರ 32, ತಮಿಳುನಾಡಿ 26, ದೆಹಲಿ 15, ರಾಜಸ್ಥಾನ 4, ತೆಲಂಗಾಣ 2, ಒಡಿಶಾ 1 ಮತ್ತು ಹರಿಯಾಣ 1 ಪ್ರಕರಣ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಏತನ್ಮಧ್ಯೆ, ದೇಶದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,440ಕ್ಕೆ ತಲುಪಿದ್ದು, ಮೃತರ ಸಂಖ್ಯೆ 5,33,371ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಮಾಹಿತಿ ನೀಡಿವೆ.

SCROLL FOR NEXT