ದೇಶ

ನೌಕಪಡೆ ಯಶಸ್ವಿ ಕಾರ್ಯಾಚರಣೆ: ಅಪಹರಣಕ್ಕೊಳಗಾದ ಹಡಗಿನಲ್ಲಿದ್ದ 15 ಭಾರತೀಯರ ರಕ್ಷಣೆ

Nagaraja AB

ನವದೆಹಲಿ: ಭಾರತೀಯ ನೌಕಾಪಡೆಯ ಕಮಾಂಡೋಗಳು ಶುಕ್ರವಾರ ಉತ್ತರ ಅರೇಬಿಯನ್ ಸಮುದ್ರದಲ್ಲಿ ಅಪಹರಣಕ್ಕೊಳಗಾದ ಲೈಬೀರಿಯನ್ ಧ್ವಜವಿದ್ದ ಹಡಗನ್ನು ಹತ್ತಿದ್ದು, ಅದರಲ್ಲಿದ್ದ 15 ಭಾರತೀಯರನ್ನು ರಕ್ಷಿಸಿದ್ದಾರೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಒಂದು ಡಜನ್‌ಗಿಂತಲೂ ಹೆಚ್ಚು ಭಾರತೀಯ ಸಿಬ್ಬಂದಿಯನ್ನು ಹೊಂದಿರುವ ನೌಕೆ, ಅರಬ್ಬಿ ಸಮುದ್ರದಲ್ಲಿ ಅದರ ಕಡಲ ಗಸ್ತು ವಿಮಾನ P8I ಮತ್ತು ಪರಭಕ್ಷಕ ಡ್ರೋನ್‌ನಿಂದ ಅಪಹರಣಕ್ಕೊಳಗಾದ ಎಂವಿ ಲೀಲಾ ನಾರ್ಫೋಕ್ ಹಡಗಿನ ಮೇಲೆ ಕಣ್ಗಾವಲು ಇರಿಸಲಾಗಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ.

ಮುಂಚೂಣಿ ಯುದ್ಧನೌಕೆ ಐಎನ್‌ಎಸ್ ಚೆನ್ನೈ  ಅಪಹರಣಕ್ಕೊಳಗಾದ ಹಡಗನ್ನು ಉತ್ತರ ಅರೇಬಿಯನ್ ಸಮುದ್ರದಲ್ಲಿ ಮಧ್ಯಾಹ್ನ 3:15 ಕ್ಕೆ ತಡೆದಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಸಂಜೆ ಐದರಿಂದ ಆರು ಅಪರಿಚಿತ ಶಸ್ತ್ರಸಜ್ಜಿತ ಸಿಬ್ಬಂದಿ ಹಡಗನ್ನು ಹತ್ತಿದ್ದಾರೆ ಎಂದು ಎಂವಿ ಲೀಲಾ ನಾರ್ಫೋಕ್ ಹಡಗು ಇಂಗ್ಲೆಂಡ್ ನ ಯುಕೆ ಎಂಟಿಒ (UKMTO) ಪೋರ್ಟಲ್‌ನಲ್ಲಿ  ಸಂದೇಶವನ್ನು ಕಳುಹಿಸಿತ್ತು. ಇದಕ್ಕೂ ಮುನ್ನಾ  ಪ್ರದೇಶದ ಇತರ ಕಡಲ ಏಜೆನ್ಸಿಗಳೊಂದಿಗೆ ಸಮನ್ವಯದೊಂದಿಗೆ ಒಟ್ಟಾರೆ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ನೌಕಪಡೆ ಹೇಳಿತ್ತು.

ಇಸ್ರೇಲ್-ಹಮಾಸ್ ಸಂಘರ್ಷದ ಮಧ್ಯೆ ಹೌತಿ ಉಗ್ರಗಾಮಿಗಳು ಕೆಂಪು ಸಮುದ್ರದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ದಾಳಿ ಹೆಚ್ಚಳದ ಕುರಿತು ಕಳವಳ ಹೆಚ್ಚಾಗುತ್ತಿರುವ ನಡುವೆ ಹೈಜಾಕ್ ಘಟನೆ ನಡೆದಿದೆ. ಪರಿಸ್ಥಿತಿಗೆ ತಕ್ಕಂತೆ ಪ್ರತಿಕ್ರಿಯಿಸಿದ ನೌಕಪಡೆಯು ಎಂವಿ ಲೀಲಾ ನಾರ್ಫೋಕ್  ಭದ್ರತೆಗಾಗಿ  ಐಎನ್ ಎಸ್ ಚೆನ್ನೈ ನೌಕೆಯನ್ನು ತಿರುಗಿಸಿದ್ದು, ಕಡಲ ಗಸ್ತು ವಿಮಾನವನ್ನು ನಿಯೋಜಿಸಿದೆ. 

ಸಿಬ್ಬಂದಿಯ ರಾಷ್ಟ್ರೀಯತೆಯ ಬಗ್ಗೆ ನೌಕಾಪಡೆಯಿಂದ ಯಾವುದೇ ಸ್ಪಷ್ಟತೆ ಇಲ್ಲವಾದರೂ, ಅವರಲ್ಲಿ ಹತ್ತಕ್ಕೂ ಹೆಚ್ಚು ಜನರು ಭಾರತೀಯರು ಎಂದು ತಿಳಿದುಬಂದಿದೆ. ಅಂತಾರಾಷ್ಟ್ರೀಯ ಪಾಲುದಾರರು ಮತ್ತು ಸ್ನೇಹಪರ ವಿದೇಶಿ ದೇಶಗಳೊಂದಿಗೆ ಈ ಪ್ರದೇಶದಲ್ಲಿ ವ್ಯಾಪಾರಿ ಹಡಗುಗಳ ಸುರಕ್ಷತೆಯ ಖಾತ್ರಿಗೆ ಬದ್ಧವಾಗಿದೆ ಎಂದು ನೌಕಪಡೆ ಹೇಳಿದೆ.

UKMTO ಒಂದು ಬ್ರಿಟಿಷ್ ಮಿಲಿಟರಿ ಸಂಸ್ಥೆಯಾಗಿದ್ದು, ಇದು ಆಯಕಟ್ಟಿನ ಜಲಮಾರ್ಗಗಳಲ್ಲಿ ವಿವಿಧ ಹಡಗುಗಳ ಚಲನೆಯನ್ನು ಪತ್ತೆಹಚ್ಚುತ್ತದೆ. ಕಳೆದ ಕೆಲವು ವಾರಗಳಲ್ಲಿ ಆಯಕಟ್ಟಿನ ಸಮುದ್ರದ ಪ್ರದೇಶದಲ್ಲಿ ಇಂತಹ ಘಟನೆಗಳು ವರದಿಯಾಗುತ್ತಲೇ ಇವೆ.  21 ಭಾರತೀಯ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದ ಲೈಬೀರಿಯನ್ ಧ್ವಜದ ನೌಕೆ MV ಕೆಮ್ ಪ್ಲುಟೊ ಡಿಸೆಂಬರ್ 23 ರಂದು ಭಾರತದ ಪಶ್ಚಿಮ ಕರಾವಳಿಯಲ್ಲಿ ಡ್ರೋನ್ ದಾಳಿಗೆ ಗುರಿಯಾಗಿತ್ತು.

MV ಕೆಮ್ ಪ್ಲುಟೊ ಅಲ್ಲದೆ, ಭಾರತಕ್ಕೆ ತೆರಳುತ್ತಿದ್ದ ಮತ್ತೊಂದು ವಾಣಿಜ್ಯ ತೈಲ ಟ್ಯಾಂಕರ್ ಅದೇ ದಿನ ದಕ್ಷಿಣ ಕೆಂಪು ಸಮುದ್ರದಲ್ಲಿ ಶಂಕಿತ ಡ್ರೋನ್ ದಾಳಿಗೆ ಒಳಗಾಯಿತು. ಆ ನೌಕೆಯಲ್ಲಿ 25 ಭಾರತೀಯ ಸಿಬ್ಬಂದಿಗಳಿದ್ದರು. ಮತ್ತೊಂದು ಘಟನೆಯಲ್ಲಿ, ಮಾಲ್ಟಾ-ಧ್ವಜದ ಹಡಗು MV ರುಯೆನ್ ಅನ್ನು ಡಿಸೆಂಬರ್ 14 ರಂದು ಕಡಲ್ಗಳ್ಳರು ಅಪಹರಿಸಿದ್ದರು.

ಉತ್ತರ ಮತ್ತು ಮಧ್ಯ ಅರೇಬಿಯನ್ ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಕಡಲ ಭದ್ರತಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮುಂದುವರೆಸಿರುವುದಾಗಿ ನೌಕಪಡೆ ಹೇಳಿದೆ. 

SCROLL FOR NEXT