ದೇಶ

ಗ್ಯಾನವಾಪಿ: ಎಎಸ್ಐ ವರದಿ ಬಹಿರಂಗಗೊಳಿಸುವ ಸಂಬಂಧ ಕೋರ್ಟ್ ತೀರ್ಪು ಜ.24ಕ್ಕೆ

Srinivas Rao BV

ವಾರಣಾಸಿ: ಗ್ಯಾನವಾಪಿ ಮಸೀದಿ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಎಎಸ್ಐ ವರದಿಯನ್ನು ಬಹಿರಂಗಗೊಳಿಸುವ, ವಾದಿ-ಪ್ರತಿವಾದಿಗಳಿಗೆ ತಲುಪಿಸುವ ಸಂಬಂಧದ ತೀರ್ಪನ್ನು ಜ.24 ಕ್ಕೆ ನಿಗದಿಪಡಿಸಿದೆ. 

ಹಿಂದೂ ಮತ್ತು ಮುಸ್ಲಿಂ ಪರ ವಕೀಲರು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಯನ್ನು ಪ್ರತಿನಿಧಿಸುವವರು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗದ ಫಾಸ್ಟ್ ಟ್ರ್ಯಾಕ್ ಕೋರ್ಟ್‌ನಲ್ಲಿ ನಡೆಯುವ ಪ್ರಕರಣದ ವಿಚಾರಣೆಯ ನಂತರ ಈ ವಿಷಯದ ಬಗ್ಗೆ ನಿರ್ಧರಿಸುವುದಾಗಿ ನ್ಯಾಯಾಲಯ ಹೇಳಿದೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಜನವರಿ 19 ರಂದು ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ. 

SCROLL FOR NEXT