ದೇಶ

ಮಧ್ಯಪ್ರದೇಶ: ಸುಮಾರು 25,000 ಮಾಂಸ, ಮೀನು ಮಾರಾಟ ಅಂಗಡಿಗಳ ತೆರವು- ಸಿಎಂ ಮೋಹನ್ ಯಾದವ್

Nagaraja AB

ಉಜ್ಜಯಿನಿ:  ಮಧ್ಯ ಪ್ರದೇಶದಲ್ಲಿ ಕಳೆದ 25 ದಿನಗಳಲ್ಲಿ ಬಯಲಿನಲ್ಲಿ ಮಾಂಸ, ಮೀನು ಮಾರಾಟ ಮಾಡುತ್ತಿದ್ದ ಸುಮಾರು 25,000 ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು  ಮುಖ್ಯಮಂತ್ರಿ ಮೋಹನ್ ಯಾದವ್ ಭಾನುವಾರ ಹೇಳಿದ್ದಾರೆ.

218 ಕೋಟಿ ರೂಪಾಯಿ ಮೊತ್ತದ 187 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ ಯಾದವ್, ಬಯಲಿನಲ್ಲಿ ಮಾಂಸ ಮತ್ತು ಮೀನು ಮಾರಾಟ ಮಾಡುವ ಅಂಗಡಿಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದೇನೆ.  ಇಂದು ರಾಜ್ಯದಲ್ಲಿ ಸುಮಾರು 25,000 ಮಾಂಸ ಮತ್ತು ಮೀನುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಿಸಲಾಗಿದೆ ಎಂದು ತಿಳಿಸಿದರು. 

ಮಧ್ಯಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಅವ್ಯಾಹತವಾಗಿ ನಡೆಯಲಿದ್ದು, ಇದರಲ್ಲಿ ಯಾವುದೇ ರಾಜಿ ಇಲ್ಲ. ಮಕರ ಸಂಕ್ರಾಂತಿ ಹಬ್ಬವನ್ನು ರಾಜ್ಯದಲ್ಲಿ ಮಹಿಳಾ ಸಬಲೀಕರಣ ದಿನವನ್ನಾಗಿ ಆಚರಿಸಲಾಗುವುದು, ಮಹಾಕಾಳೇಶ್ವರ ದೇವಾಲಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಕಳೆದ ವರ್ಷ ಡಿಸೆಂಬರ್ 13 ರಂದು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಯಾದವ್ ಮಧ್ಯ ಪ್ರದೇಶದಲ್ಲಿ ಬಯಲಿನಲ್ಲಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸಿ ನಿರ್ದೇಶನಗಳನ್ನು ನೀಡಿದ್ದರು. 

SCROLL FOR NEXT