ದೇಶ

ಅಯೋಧ್ಯೆ ರಾಮಮಂದಿರಕ್ಕಾಗಿ ಹ್ಯಾರಿಸನ್ ಲಾಕ್ಸ್‌ ನಿಂದ 50 ಕೆಜಿ ತೂಕದ ಬೀಗ ಗಿಫ್ಟ್!

Nagaraja AB

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು ಉದ್ಘಾಟನೆಯಾಗಲಿರುವ ರಾಮ ಮಂದಿರಕ್ಕಾಗಿ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಹ್ಯಾರಿಸನ್ ಲಾಕ್ಸ್ 50 ಕೆಜಿ ತೂಕದ ಬೀಗವನ್ನು ಸಿದ್ಧಪಡಿಸಿದೆ.

ಬೀಗಗಳ ತಯಾರಿಕೆ ಕೇಂದ್ರವಾಗಿ ಹೆಸರುವಾಸಿಯಾಗಿರುವ ಅಲಿಗಢ ಪರವಾಗಿ ಈ ಬೀಗವನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ಇದು ಅಯೋಧ್ಯೆಯ ರಾಮಮಂದಿರಕ್ಕೆ ನಮ್ಮ ಕಡೆಯಿಂದ ಉಡುಗೊರೆಯಾಗಿದೆ ಎಂದು  ಹ್ಯಾರಿಸನ್ ಲಾಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮಂಗ್ ಮೊಂಗಾ ಹೇಳಿದ್ದಾರೆ.

ಉಮಂಗ್ ಮೊಂಗಾ ಅವರು, ಪ್ರಧಾನಿ ಮೋದಿಯವರ 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಪ್ರೋತ್ಸಾಹಿಸಿದ್ದು, ಈ ನಿಟ್ಟಿನಲ್ಲಿ 50 ಕೆಜಿ ಬೀಗ ತಯಾರಿಸಿರುವುದಾಗಿ ತಿಳಿಸಿದ್ದಾರೆ. 

ಇದು ಅಲಿಗಢ ಮತ್ತು ಅಯೋಧ್ಯೆ ಎರಡೂ ಜಿಲ್ಲೆಗಳನ್ನು ಸಂಪರ್ಕಿಸುವ ಸಂಕೇತವಾಗಿದೆ. ಅಲಿಗಢ ಬೀಗ ಉದ್ಯಮಕ್ಕೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ. ಇಡೀ ಜಗತ್ತು ಅಯೋಧ್ಯೆಯತ್ತ ನೋಡುತ್ತಿದ್ದು,ಅಲಿಗಢವನ್ನು ಪ್ರಪಂಚದತ್ತ ಗುರುತಿಸುವ ಪ್ರಯತ್ನವಾಗಿದೆ. ಕೈಯಿಂದ ಮಾಡಿದ ಬೀಗದ  ಮೇಲೆ 'ಜೈ ಶ್ರೀ ರಾಮ್' ಎಂದು ಕೆತ್ತಲಾಗಿದೆ ಎಂದು ಉಮಂಗ್ ಮೊಂಗಾ ವಿವರಿಸಿದ್ದಾರೆ. 

SCROLL FOR NEXT